ಆರೋಗ್ಯ ವೃದ್ಧಿಗೆ ಕಿವಿ ಹಣ್ಣು

ಆರೋಗ್ಯ ವೃದ್ಧಿಗೆ ಕಿವಿ ಹಣ್ಣು

ಬೆಂಗಳೂರು, ಅ. 21: ಕಿವಿ ಹಣ್ಣು ಅನೇಕ ರೋಗಗಳಿಗೆ ರಾಮಬಾಣ ಎಂದರೆ ತಪ್ಪಾಗಲಾರದು. ಈ ಹಣ್ಣನ್ನು ತಿನ್ನುವುದರಿಂದ ರಕ್ತದಲ್ಲಿ ಪ್ಲೇಟ್ಲೆಟ್ಗಳು ಹೆಚ್ಚುತ್ತದೆ. ಡೆಂಘೀ ಜ್ವರ ಮತ್ತು ಕಾಮಾಲೆ ಖಾಯಿಲೆ ಇದ್ದರೆ ಕಿವಿ ಹಣ್ಣನ್ನು ತಿನ್ನುವುದರಿಂದ ಪರಿಹಾರ ಕಾಣಬಹುದು.

ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ಗಳ ಮೂಲವೆಂದು ಪರಿಗಣಿಸಲಾಗುವ ಕಿವಿ ಹಣ್ಣಿನ ಸೇವನೆಯಿಂದ ಡಿಎನ್ಎ ಅನ್ನು ಉತ್ತಮಗೊಳಿಸಬಹುದು.

– ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣವು ಹೇರಳವಾಗಿದ್ದು ಇದು ಜೀವಕೋಶಗಳು ನಿರ್ನಾಮವಾಗದಂತೆ ತಡೆಯುತ್ತದೆ.

ದೇಹದ ಉರಿಯೂತವನ್ನು ತಡೆಗಟ್ಟಲು ಕಿವಿ ಹಣ್ಣು ಸಹಾಯ ಮಾಡುತ್ತದೆ.

– ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕಿವಿ ಹಣ್ಣು ತುಂಬಾ ಪ್ರಯೋಜನಕಾರಿ.

– ಈ ಹಣ್ಣನ್ನು ತಿನ್ನುವುದರಿಂದ ಮೈಕ್ಯುಲರ್ ಡಿಜೆನರೇಷನ್ ಸಮಸ್ಯೆಯನ್ನು ದೂರ ಮಾಡಬಹುದು. ಇದರಿಂದ ಭವಿಷ್ಯದಲ್ಲಿ ದೃಷ್ಟಿದೋಷದ ಸಮಸ್ಯೆಯಿಂದ ಪಾರಾಗಬಹುದು.

– ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಮತ್ತು ಟ್ರೈಗಿಲ್ಸ್ರೈಡಸ್ಗಳನ್ನು ಕಡಿಮೆ ಮಾಡಲು ಕಿವಿ ಹಣ್ಣು ಪ್ರಯೋಜನಕಾರಿಯಾಗಿದೆ.

– ಪ್ರತಿನಿತ್ಯ ಕಿವಿ ಹಣ್ಣನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಹೆಚ್ಚಾಗುತ್ತದೆ.

– ಕಿವಿ ಹಣ್ಣಗಳಲ್ಲಿ 110 ಕ್ಯಾಲೊರಿಗಳಿದ್ದು, ಎರಡು ಗ್ರಾಂ ಪ್ರೋಟೀನ್ ಮತ್ತು ಒಂದು ಗ್ರಾಂನಷ್ಟು ಕೊಬ್ಬು ಒಳಗೊಂಡಿರುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲೂ ಈ ಹಣ್ಣನ್ನು ತಿನ್ನಬಹುದು.

ಫ್ರೆಶ್ ನ್ಯೂಸ್

Latest Posts

Featured Videos