ಸ್ಟೀವ ಸ್ಮಿತ್ ಗೆ ಸಡ್ಡು ಹೊಡೆದು ಕಿಂಗ್ ಆಗಿ ಮೆರೆಯುತ್ತಿರುವ ಕೊಹ್ಲಿ

ಸ್ಟೀವ ಸ್ಮಿತ್ ಗೆ ಸಡ್ಡು ಹೊಡೆದು ಕಿಂಗ್ ಆಗಿ ಮೆರೆಯುತ್ತಿರುವ ಕೊಹ್ಲಿ

ಪುಣೆ, ಅ. 11 : ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ದಾಖಲೆಯ 7ನೇ ದ್ವಿಶತಕ ಸಿಡಿಸಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ಈ ಮಧ್ಯೆ ಟೆಸ್ಟ್ ಕ್ರಿಕೆಟ್ನ ವೃತ್ತಿ ಜೀವನದಲ್ಲಿ 7000 ರನ್ಗಳ ಮೈಲುಗಲ್ಲು ತಲುಪುವ  ಮೂಲಕ  ಆಸ್ಟ್ರೇಲಿಯಾದ ಮಾಜಿ ನಾಯಕ ಸರ್ ಡಾನ್ ಬ್ರಾಡ್ಮನ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಕೊಹ್ಲಿ  ಹಿಂದಿಕ್ಕಿದ್ದಾರೆ. 138 ಇನ್ನಿಂಗ್ಸ್ ಗಳಲ್ಲಿ  7 ಸಾವಿರ ರನಗಳ  ಮೈಲುಗಲ್ಲು ತಲುಪುವ  ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನ ಅಲಂಕರಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos