ಭಾಷೆ, ಸಂಸ್ಕೃತಿ ಬೆಳೆಸುವುದೆ ಕಸಾಪ ಗುರಿ

  • In State
  • December 14, 2020
  • 147 Views
ಭಾಷೆ, ಸಂಸ್ಕೃತಿ ಬೆಳೆಸುವುದೆ ಕಸಾಪ ಗುರಿ

ಕೆಜಿಎಫ್: ಗಡಿಭಾಗದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳಸುವ ಉದ್ದೇಶವನ್ನು ಕಸಾಪ ಹೊಂದಿದೆ. ಸದಸ್ಯರನ್ನು ಹೆಚ್ಚಿಸಿ ಚುನಾವಣೆಯಲ್ಲಿ ಗೆಲ್ಲುವ ತಂತ್ರ ನಮಗೆ ಬೇಕಾಗಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.
ಸೋಮವಾರ ಬೆಮಲ್‌ನಗರದ ಬಸವ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ನಾಲ್ಕು ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಣವುಳ್ಳವರು ಕನ್ನಡ ಮನಸ್ಸು ಹೊಂದಿ ದತ್ತಿ ಕಾರ್ಯಕ್ರಮಕ್ಕೆ ಠೇವಣಿ ನೀಡಬೇಕು ಎಂದು ಮನವಿ ಮಾಡಿದರು.
ಕೆಜಿಎಫ್ ನಲ್ಲಿ ಕನ್ನಡ ಚಳವಳಿ ವಿಷಯವಾಗಿ ಮಾತನಾಡಿದ ಬಿ.ಎಸ್.ಪೀತಾಂಬರಂ ರವರು ಗೊಲ್ಲಹಳ್ಳಿ, ಸೂರಪಲ್ಲಿ ಮೊದಲಾದ ಗ್ರಾಮೀಣಕನ್ನಡ ಸಂಘಗಳು ಮೊದಲು ಕನ್ನಡ ಪರ ಧ್ವನಿ ಎತ್ತಿದವು. ರಾಬರ್ಟಸನ್ಪೇಟೆಯ ಕನ್ನಡ ಸಂಘ, ಕನ್ನಡ ಮಿತ್ರರು ಮೊದಲಾದ ಸಂಸ್ಥೆಗಳು ಕನ್ನಡದ ಬಳಕೆಗೆ ಹೆಚ್ಚು ಕೊಡುಗೆ ನೀಡಿದವು ಎಂದರು.
ಪ್ರೊ. ಸುಧಾಕರ್ ರವರು ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆ, ಶರಣಪ್ಪ ಗಬೂರು ರವರು ಸೂಫಿ ಸಂತರ ಬಗ್ಗೆ ಮತ್ತು ಕೆ.ಜಿ.ಮಂಜುನಾಥ್ ವಚನ ಸಾಹಿತ್ಯ ಮತ್ತು ಸಮಾಜ ಸುಧಾರಣೆ ಬಗ್ಗೆ ಮಾತನಾಡಿದರು.
ಬಸವ ಸಮಿತಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ವಿ.ಬಿ.ದೇಶಪಾಂಡೆ, ಗೌರವ ಅಧ್ಯಕ್ಷ ವೀರವೆಂಕಟಪ್ಪ ಮೊದಲಾದವರು ಹಾಜರಿದ್ದರು. ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos