ಕಾಫಿನಾಡಲಿ ಕಾಳಿಂಗ

ಕಾಫಿನಾಡಲಿ ಕಾಳಿಂಗ

ಚಿಕ್ಕಮಗಳೂರು , ಜು. 12 : ಕಾಳಿಂಗ ಸರ್ಪ ದಾಳಿ ಮಾಡಲು ಮುಂದಾಗಿ ಹತ್ತಾರು ಬಾರಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆಗೆ ಕಾಫಿನಾಡು ಸಾಕ್ಷಿ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಾಳುಕರಗುಂದ ಗ್ರಾಮದ ಜಾರ್ಜ್ ಎಂಬವರ ಕಾಫಿತೋಟದಲ್ಲಿ ಮೊಲ ಅಟ್ಟಿಸಿಕೊಂಡು ಬಂದ ಕಾಳಿಂಗ ಸರ್ಪ ಕಾಫಿತೋಟದಲ್ಲಿ ಬೀಡು ಬಿಟ್ಟಿದೆ. ಭಯಗೊಂಡು ತೋಟದ ಮಾಲೀಕರಿಗೆ ಆರ್.ಪುರದ ಉರಗ ತಜ್ಞ ಹರೀಂದ್ರ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಕಾಳಿಂಗ ಸರ್ಪ ಬಾಲ ಹಿಡಿದು ಎಳೆಯುತ್ತಿದ್ದಂತೆ ಹತ್ತಾರು ಬಾರಿ ಅವರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿತು. ಆ ದೃಶ್ಯ ಮಾತ್ರ ನೋಡುಗರಿಗೆ ಎದೆ ಝಲ್ ಎನ್ನಿಸುವಂತ್ತಿತ್ತು.
ಒಂದು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಸೆರೆಹಿಡಿದ 14 ಅಡಿ ಉದ್ದ ಹೆಣ್ಣು ಕಾಳಿಂಗ ಸರ್ಪವನ್ನು ಹರಿಂದ್ರ ಅವರುವ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಸೆರೆ ಹಿಡಿಯುವಾಗ ಕಾಳಿಂಗ ಸರ್ಪದ ಆರ್ಭಟ ಕಂಡ ತೋಟದ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos