ಕನ್ನಡ ಭಾಷೆಗೆ 2 ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ

ಕನ್ನಡ ಭಾಷೆಗೆ 2 ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ

ಮಹದೇವಪುರ, ನ. 30: ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಒಳಿದಿರುವುದು ನಮ್ಮೆಲ್ಲರ ಹೆಮ್ಮೆ, ನಮ್ಮ ಭಾಷೆಯ ಹಿರಿಮೆಯನ್ನು ಯುವಪೀಳಿಗೆ ಮತ್ತಷ್ಟು ಹೆಚ್ಚಿಸಬೇಕೆಂದು ಸಮಾಜ ಸೇವಕ ಹೂಡಿ ಪ್ರಕಾಶ್ ಬಾಬು ಅವರು ತಿಳಿಸಿದರು.

ಹೂಡಿ ಬಸವನಗರ ರಸ್ತೆಯ ಸಾಯಿ ಕಾಂಪ್ಲೆಕ್ಸ್ ಬಳಿಯ ಆಟೋ ನಿಲ್ದಾಣ ಯುವಕರಿಂದ ಏರ್ಪಡಿಸಿದ್ದ 64ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡ ಧ್ವಜಾರೋಹಣ ಮಾಡಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಅವರು, ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದ್ದು, ಕನ್ನಡ ಭಾಷೆಯನ್ನು ಉಳಿಸಿಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಇದೇ ವೇಳೆ ಟಿ.ಕೆ.ಆರ್ ಫೌಂಡೇಶನ್ ಅಧ್ಯಕ್ಷ ಕಿರಣ್ ಕುಮಾರ್ ರೆಡ್ಡಿ ಅವರ ವತಿಯಿಂದ ಇಲ್ಲಿನ ಸರ್ಕಾರಿ ಶಾಲೆಯ 200 ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕಗಳು, ಬ್ಯಾಗ್ ಗಳು, ಇತರೆ ಸಾಮಗ್ರಿಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ಕನ್ನಡ ಭಾಷೆಯ ಕೀರ್ತಿಯನ್ನು ಹೊರರಾಜ್ಯಗಳಿಂದ ಬಂದು ನೆಲಸಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಮೂಲಕ ಕನ್ನಡ ಭಾಷೆಯ ಹಿರಿಮೆ ಹೆಚ್ಚಿಸುವಂತೆ ಮಾಡಲು ಸಲಹೆ ನೀಡಿದರು.

ರಾಜ್ಯೋತ್ಸವವನ್ನು ನವೆಂಬರ್ 1 ನೇ ತಾರೀಖು ಗೆ ಮಾತ್ರ ಸ್ಥಿಮೀತವಾಗಿಸದೆ ನಿರಂತರವಾಗಿ ಕನ್ನಡ ಕಾರ್ಯಕ್ರಮ ಗಳನ್ನು ಆಚರಿಸುವ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮೀಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಅನಂತರಾಮಯ್ಯ, ಆಟೋ ಘಟಕದ ಮುಖ್ಯಸ್ಥ ನಾಗರಾಜ್,  ಸೇರಿದಂತೆ ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos