ರವೀಂದ್ರ ಕಲಾಕ್ಷೇತ್ರದಲ್ಲಿ 12ರವರೆಗೆ ಕನ್ನಡ ಪುಸ್ತಕ ರಿಯಾಯ್ತಿ ಮೇಳ; ಸಾಹಿತ್ಯಾಸಕ್ತರು ತಪ್ಪದೇ ಭೇಟಿ ನೀಡಿ

ರವೀಂದ್ರ ಕಲಾಕ್ಷೇತ್ರದಲ್ಲಿ 12ರವರೆಗೆ ಕನ್ನಡ ಪುಸ್ತಕ ರಿಯಾಯ್ತಿ ಮೇಳ; ಸಾಹಿತ್ಯಾಸಕ್ತರು ತಪ್ಪದೇ ಭೇಟಿ ನೀಡಿ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದಿಂದ ನಿನ್ನೆಯಿಂದ 12ರವರೆಗೆ ಕನ್ನಡ ಪುಸ್ತಕ ರಿಯಾಯಿತಿ ಮಾರಟ ಮೇಳ ನಡೆಯುತ್ತಿದೆ. ಸಾಹಿತ್ಯಾಸಕ್ತರು ತಪ್ಪದೇ ಭೇಟಿ ನೀಡಿ, ತಮ್ಮ ನೆಚ್ಚಿನ ಬರಹಗಾರರ ಪುಸ್ತಕ ಕೊಂಡು ಓದಿ…

ನಗರದ ರವೀಂದ್ರ
ಕಲಾಕ್ಷೇತ್ರ ಆವರಣದಲ್ಲಿ ನಡೆಯುತ್ತಿದೆ.

ನಾಲ್ಕು ದಿನಗಳ ಕಾಲ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯುವ ಮೇಳದಲ್ಲಿ 60 ಮಳಿಗೆಗಳಿಗೆ ಅವಕಾಶವನ್ನು ನೀಡಲಾಗಿದೆ. ರಾಜ್ಯಾದಾದ್ಯಂತ ಸುಮಾರು 50ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿವೆ.

ವಿವಿಧ ಖ್ಯಾತ ನಾಮರ ಪುಸ್ತಕಗಳ ಪ್ರದರ್ಶನ ಮತ್ತು ರಿಯಾಯಿತಿ ದರದ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಪ್ರತೀ ದಿನ ಸಂಜೆ 6 ಗಂಟೆಯ ನಂತರ ನೃತ್ಯ, ರಂಗ ಗೀತೆ ಕವಿ ಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯಲಿವೆ.

ಪ್ರತೀ ದಿನ ಸಂಜೆ ಆಯ್ದ ಪ್ರಮುಖ ಸಾಹಿತಿಗಳೊಂದಿಗೆ ಸೆಲ್ಫೀ ತೆಗೆದುಕೊಳ್ಳುವ ಅವಕಾಶ ಪುಸ್ತಕ ಪ್ರಿಯರಿಗೆ ನೀಡಲಾಗಿದೆ. ಇಂದು ಮೊದಲ ದಿನ ಆಗಿದ್ದರಿಂದ ಭೇಟಿ ನೀಡಿದ ಸಾಹಿತ್ಯಾಸಕ್ತರ ಸಂಖ್ಯೆ ಕಡೆಮೆಯಿತ್ತು. ನಾಳೆ ಶನಿವಾರ ಮತ್ತು ಭಾನುವಾರ ವೀಕೆಂಡ್​ ಆಗಿದ್ದು ಭೇಟಿ ನೀಡುವವರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಆಯ್ದ ಪುಸ್ತಕಗಳ ಮೇಲೆ ಶೇ. 10 ರಿಂದ ಶೇ. 50ರವರೆಗೆ ರಿಯಾಯಿತಿ ಸಿಗಲಿದೆ.

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಸಾಂಸ್ಕೃತಿಕ ಕಲಾಮೇಳ ಹಮ್ಮಿಕೊಳ್ಳಲಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಸುಸರ್ಜಿತ ಅಂಗಡಿಗಳ ವ್ಯವಸ್ಥೆ ಮಾಡಿದೆ,  ಆದರೂ ಸಾಹಿತ್ಯಾಸಕ್ತರು ಮೇಳಕ್ಕೆ ಬಂದಿಲ್ಲ. ಪ್ರಾಧಿಕಾರ ಮೇಳದ ಮುಂಚೆಯಿಂದಲೂ ಮೇಳದ ಪ್ರಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರೆ ಹೆಚ್ಚು ಸಾಹಿತ್ಯಾಸಕ್ತರು ಮೇಳಕ್ಕೆ ಬರುತ್ತಿದ್ದರು. ನಮ್ಮ ನಿರೀಕ್ಷೆಯಂತೆ ಪುಸ್ತಕಗಳು ಮಾರಾಟವಾಗುತ್ತಿಲ್ಲ. ನಾಳೆ ರವಿವಾರವಾದ್ದರಿಂದ ಹೆಚ್ಚಿನ ಸಂಖ‍್ಯೆಯ ಜನರು ಭಾಗವಹಿಸಬಹುದೆಂಬ ನಿರೀಕ್ಷೆ ಇದೆ.

– ರಾಮಚಂದ್ರ ರಾವ್‍, ಬಸವರಾಜ್‍, ಕ್ರಿಯಾ ಮಾಧ್ಯಮದ ಪುಸ್ತಕ ಪ್ರೀತಿ ಮಳಿಗೆ

ಫ್ರೆಶ್ ನ್ಯೂಸ್

Latest Posts

Featured Videos