ಕಮಲ ಆಡಿಯೋ ಪ್ರಕರಣ; ಇಂದು ವಿಚಾರಣೆ

ಕಮಲ ಆಡಿಯೋ ಪ್ರಕರಣ; ಇಂದು ವಿಚಾರಣೆ

ಕಲಬುರ್ಗಿ, ಅ. 25 : ಹೆಚ್.ಡಿ. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಭಾರೀ ಚರ್ಚೆಗೊಳಗಾಗಿದ್ದ ಆಪರೇಷನ್ ಕಮಲದ ಕಾವು ಇನ್ನೂ ಕಡಿಮೆಯಾಗಿಲ್ಲ. ಆಪರೇಷನ್ ಕಮಲ ಆಡಿಯೋ ಕ್ಲಿಪ್ ಪ್ರಕರಣದ ವಿಚಾರಣೆ ಮೇಲಿದ್ದ ತಡೆ ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಅಪರಾಹ್ನ 2.30ಕ್ಕೆ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ನಡೆಯಲಿದೆ. ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಯ ತಡೆಯಾಜ್ಞೆ ತೆರವಿಗೆ ಮನವಿ ಮಾಡಿರುವ ಶರಣಗೌಡ ಕಂದಕೂರ ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ 2.30ರ ನಂತರ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಶರಣಗೌಡ ಪರ ಈಗಾಗಲೇ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ. ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರಿಂದ ವಾದ ಮಂಡನೆಯಾಗಲಿದೆ. ಬಿಜೆಪಿಯ ಆಪರೇಷನ್ ಕಮಲ ಆಡಿಯೋ ಕೇಸ್ ತಡೆಯಾಜ್ಞೆ ತೆರವುಗೊಳಿಸುವಂತೆ ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರ ಮಗ ಶರಣಗೌಡ ಕಂದಕೂರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos