ಜು. 7 ರಂದು ” ಕನ್ನಡ ನುಡಿ  ನಮನ ” ಕಾರ್ಯಕ್ರಮ

ಬೆಂಗಳೂರು, ಜು. 5:  ನಗರದ ಪೀಣ್ಯ ದಾಸರಹಳ್ಳಿಯಲ್ಲಿ ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ ” ಕನ್ನಡ ನುಡಿ ನಮನ ” ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಮಾಡಲಿದ್ದಾರೆ. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಡಾ. ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಸಾ ರಾ ಗೋವಿಂದ್  ವಹಿಸಿಕೊಳ್ಳಲಿದ್ದಾರೆ

ಜುಲೈ 7 ಭಾನುವಾರ ರಂದು ಬೆಳಿಗ್ಗೆ 9:00 ಗಂಟೆಗೆ 8 ನೇ ಮೈಲಿ ವೃತ್ತದಿಂದ  ಸಾಂಸ್ಕೃತಿಕ ಕಲಾ ತಂಡಗಳಾದ ಡೊಳ್ಳು ಕುಣಿತ ,ವೀರಗಾಸೆ , ಕಂಸಾಳೆ ತಂಡಗಳೊಂದಿಗೆ ತಾಯಿ ಭುವನೇಶ್ವರಿಯ ಮೆರವಣಿಗೆ ಬಾಗಲಗುಂಟೆಯ ಸಾಯಿ ಕಲ್ಯಾಣ ಮಂಟಪದವರೆಗೂ  ಮಾಡಲಾಗುವುದು. ನಂತರ ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ ಜನಸ್ಪಂದನ ಸಾಹಿತ್ಯ ಮತ್ತು ಸಂಸ್ಕೃತಿ ಬಳಗ ಉದ್ಘಾಟನೆಯನ್ನು ಮಾಜಿ ಶಾಸಕ ಎಸ್ ಮುನಿರಾಜು ಮಾಡಲಿದ್ದು ನಂತರ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು ಕಾದಂಬರಿಕಾರ್ತಿ ಭಾರತಿ ವೈ ಕೋಕಲೆಯವರ ” ಯಾವ ಹೂವು ಯಾರ ಮುಡಿಗೋ ” ಕಾದಂಬರಿ ಹಾಗೂ ಕವಿ ಎಂ ಆರ್ ನದಾಫ್ ಅವರ ” ಅಂತರಂಗದ ಕವಲುಗಳು ” ಕವನ ಸಂಕಲನ  ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೂವತ್ತು ಜನ ಕವಿಗಳಿಂದ ರಾಜ್ಯಮಟ್ಟದ ಕವಿಗೋಷ್ಠಿ, ಮತ್ತು 35 ಜನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು ನಂತರ ಉತ್ತರ ಲೋಕಸಭಾ ಕ್ಷೇತ್ರದ ಕೇಂದ್ರ ಸಚಿವರಾದ ಡಿ ವಿ  ಸದಾನಂದಗೌಡ ಅವರಿಗೆ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಸ್ಪಂದನ ಟ್ರಸ್ಟ್ ರಾಜ್ಯಾಧ್ಯಕ್ಷ ಹನಮಂತಪ್ಪ ಎಸ್ ಮೇಡೆಗಾರ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos