ಚನ್ನಪಟ್ಟಣದ ಜೆಡಿಎಸ್ ನಾಯಕರು ಕೈಗೆ ಸೇರ್ಪಡೆ

ಚನ್ನಪಟ್ಟಣದ ಜೆಡಿಎಸ್ ನಾಯಕರು ಕೈಗೆ ಸೇರ್ಪಡೆ

ರಾಮನಗರ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಉಳಿದಿದ್ದು. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ರಾಜ್ಯದಲ್ಲೇ ಕಣಕ್ಕಿಳಿಯುತ್ತಿದ್ದಾರೆ. ಇದರಿಂದ ಜೆಡಿಎಸ್ ಅಭ್ಯರ್ಥಿಗಳಲ್ಲಿ ಮನಸ್ತಾಪ ಉಂಟಾಗಿ ಜೆಡಿಎಸ್ 9 ಅಭ್ಯರ್ಥಿಗಳು ನಿನ್ನೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಲೋಕಚುನಾವಣೆ ಸಮಯದಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಶಾಕ್ ನೀಡಿದೆ. ಜೆಡಿಎಸ್ ನ 9 ಮಂದಿ ಚನ್ನಪಟ್ಟಣ ನಗರಸಭಾ ಸದಸ್ಯರನ್ನು ಡಿಕೆಶಿ ಆಪರೇಷನ್ ಮಾಡಿದ್ದಾರೆ.

ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಪ್ರಶಾಂತ್ ಪಿ. ಸೇರಿದಂತೆ 9 ಮಂದಿ ಜೆಡಿಎಸ್ ಸದಸ್ಯರು ಜೆಡಿಎಸ್ ಪಕ್ಷವನ್ನು ತೊರೆದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಎಂಎಲ್ಸಿ ಪುಟ್ಟಣ್ಣ ಅವರ ಸಮ್ಮುಖದಲ್ಲಿ ನಿನ್ನೆ ರಾತ್ರಿ ಸದಾಶಿವನಗರದಲ್ಲಿರುವ ಶಿವಕುಮಾರ್ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಇವರ ಜತೆಗೆ ಪಕ್ಷೇತರ ಸದಸ್ಯೆ ಉಮಾ ಅವರೂ ಕಾಂಗ್ರೆಸ್ ಸೇರಿದರು. ರೇವಣ್ಣ ಎಂ.ಜೆ., ಎ. ಸತೀಶ್ ಬಾಬು, ಶ್ರೀನಿವಾಸಮೂರ್ತಿ, ಲೋಕೇಶ್ ಸಿ.ಜೆ., ನಾಗೇಶ್, ಸಯ್ಯದ್ ರಫೀಕ್ ಅಹ್ಮದ್ ಕುನುಮೀರಿ, ಅಭಿದಾಬಾನು, ಭಾನುಪ್ರಿಯಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಸದಸ್ಯರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos