ಕೃಷ್ಣ ರಾಜ ಮಾರುಕಟ್ಟೆಯಲ್ಲಿ ಜನವೋ ಜನ

ಕೃಷ್ಣ ರಾಜ ಮಾರುಕಟ್ಟೆಯಲ್ಲಿ ಜನವೋ ಜನ

ಬೆಂಗಳೂರು, ಆ. 31: ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಕಾಲಿಡಲಾಗದಷ್ಟು ಜನಸಂದಣಿಯ ಕೇಂದ್ರ ಸ್ಥಾನ ಕೃಷ್ಣ ರಾಜ ಮಾರುಕಟ್ಟೆಯಲ್ಲಿ ಜನವೋ ಜನ.

ತಿಂಗಳ ಅಂತ್ಯ ಹಾಗೂ ಸೆಪ್ಟೆಂಬರ್ ಮೊದಲ ಎರಡು ದಿನಗಳಲ್ಲಿ ಗೌರಿ ಗಣೇಶ ಚತುರ್ಥಿ ಹಬ್ಬದ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಾಗಾಗಿ ವಿಶೇಷ ಹಾಗೂ ಶ್ರದ್ದೆ, ಭಕ್ತಿಭಾವಗಳಿಂದ ಗೌರಿ ಗಣೇಶ ಪೂಜೆಗಾಗಿ ಇಂದಿನಿಂದಲೇ ಮಾರುಕಟ್ಟೆಯಲ್ಲಿ ಜನಸಾಗರ ಹರಿದು ಬಂದಿತ್ತು. ವ್ಯಾಪಾರಿಗಳು ಮಂದಹಾಸದೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದರು.

ರಾಶಿ ರಾಶಿ ಕಸದ ನಡುವೆ ಭರಪೂರ ವ್ಯಾಪಾರ ವಹಿವಾಟು ನಡೆಯುತಿತ್ತು. ಚಂಡು ಹೂ, ಸೇವಂತಿ, ಕಾಕಡ, ಸುಗಂದರಾಜ, ಜಾಜಿಗೆ, ಮಲ್ಲಿಗೆ, ರೋಸಾ ಹೂವುಗಳ ಬೆಲೆ ಗಗನಕ್ಕೇರಿದೆ. ಆದರೂ ಕೂಳ್ಳುವಿಕೆಗೆ ಮಾತ್ರ ಬಿರುಸಿನಿಂದ ಸಾಗಿತ್ತು. ಗೌರಿ ಮತ್ತು ಗಣೇಶ ಕೂರಿಸಿ ಪೂಜಿಸಲು ಹೂವು, ಹಣ್ಣು, ತರಕಾರಿ, ಪತ್ರೆಗಳ ಕೊಳ್ಳವಿಕೆಯಲ್ಲಿ ತೊಡಗಿದ್ದ ಗಿರಾಕಿಗಳು ಸಹ ಮಾತಾನುಡುಷ್ಟು ಬಿಡುವಿಲ್ಲದೆ ವ್ಯಾಪಾರದಲ್ಲಿ ತೊಡಗಿದ್ದುದು ಕಂಡು ಬಂತು.

ಬಾಳೆಕಂದು, ಮಾವಿನಸೊಪ್ಪು, ಬೇವಿನ ಸೊಪ್ಪು, ಬಿಲ್ವ ಪತ್ರೆ, ಗರಿಕೆ, ತುಳಸಿ ಹೀಗೆ ನಾನಾ ಬಗೆಯ ಹೂವು, ಹಣ್ಣುಗಳನ್ನು ಕೊಂಡುಯ್ಯೊವುದರಲ್ಲಿ ನೂಕು ನುಗ್ಗಲುಂಟಾಗಿ ಜನರ ನಿಯಂತ್ರಿಸಲು ಪೋಲಿಸರು ಹರಸಾಹಸ ಮಾಡುತ್ತಿದ್ದರು.

ಹಣ್ಣು, ಹೂವು, ತರಕಾರಿ ಮಾರುಕಟ್ಟೆಯಲ್ಲಿ ಕಸ ಉತ್ಪಾದನೆ ಸಾಮಾನ್ಯ, ಅದನ್ನ ವಿಲೇವಾರಿ ಮಾಡಲು ಬಿಬಿಎಂಪಿ ನೌಕರರು ಬೆಳಿಗ್ಗೆ ಏಳುಗಂಟೆಯಿಂದಲೇ ತೆರವು ಮಾಡುತ್ತಿದ್ದರೂ ಅಷ್ಟೇ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತಿರುವದನ್ನು ಕಂಡು ಗೋಳಾಡುತ್ತಿದ್ದರು. ಕಸ, ಕೊಳಚೆ ನೀರಿನ ಆಜು ಬಾಜಿನಲ್ಲೇ ಹೂವು ಹಣ್ಣು ತರಕಾರಿ ಕೊಳ್ಳುವಿಕೆ ಸಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos