ಹೆಚ್ಚು ಪ್ರಯೋಜನಕಾರಿ ಹಲಸಿನ ಹಣ್ಣಿನ ಬೀಜ

ಹೆಚ್ಚು ಪ್ರಯೋಜನಕಾರಿ ಹಲಸಿನ ಹಣ್ಣಿನ ಬೀಜ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ನಾವು ದಿನನಿತ್ಯ ಬಳಸುವಂತಹ ಪದಾರ್ಥಗಳಲ್ಲಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು  ಹಲಸಿನ ಹಣ್ಣು ಯಾರಿಗ್ತಾನೆ ಇಷ್ಟವಿಲ್ಲ ವೇಳೆ, ಹಲಸಿನ ಹಣ್ಣನ್ನು ಇಷ್ಟಪಡದೇ ಇರುವವರೆ ಇಲ್ಲಾ ಹಲಸಿನ ಹಣ್ಣಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಎಲ್ಲರೂ ಸಹ ತಿಳಿದಿರುವಂತಹ ವಿಷಯ ಆದರೆ ಹಲಸಿನ ಹಣ್ಣಿನ ಬೀಜದಲ್ಲಿಯೂ ಅನೇಕ ಪೌಷ್ಟಿಕ ಅಂಶಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಹಲಸಿನ ಹಣ್ಣಿನ ಬೀಜಗಳಲ್ಲಿ ಥಯಾಮಿನ್ ಮತ್ತು ರೈಬೋಫ್ಲಾವಿನ್ ಸಮೃದ್ಧವಾಗಿದ್ದು. ಇದು ನಿಮ್ಮ ಕಣ್ಣುಗಳು, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಇದಲ್ಲದೆ, ಇದರಲ್ಲಿ ಸತು, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.

ಹಲಸಿನ ಬೀಜಗಳನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ.. ಇದರಲ್ಲಿರುವ ಮ್ಯಾಂಗನೀಸ್ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ. ಹಲಸಿನ ಬೀಜಗಳಲ್ಲಿರುವ ಕಡಿಮೆ ಪ್ರಮಾಣದ ಕ್ಯಾಲೊರಿ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹಲಸಿನ ಹಣ್ಣಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತವೆ. ಇದಲ್ಲದೆ, ಇದು ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ಹಲಸಿನ ಬೀಜಗಳು ಮುಖದಲ್ಲಿ ಕಾಣುವ ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಒತ್ತಡ, ತಲೆನೋವಿನಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಹಲಸಿನ ಬೀಜಗಳು ಸ್ಕಿನ್‌ ಟೋನ್‌ನ್ನು ಸುಧಾರಿಸುತ್ತದೆ.. ಇದಕ್ಕಾಗಿ ಈ ಹಣ್ಣಿನ ಬೀಜಗಳನ್ನು ಜೇನುತುಪ್ಪ ಮತ್ತು ಹಾಲಿನಲ್ಲಿ ನೆನೆಸಿ ಸ್ವಲ್ಪ ಸಮಯ ಬಿಡಿ. ನಂತರ ಅದನ್ನು ಪೇಸ್ಟ್ ಮಾಡಿ ಫೇಸ್ ಪ್ಯಾಕ್ ನಂತೆ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆಯಿರಿ..

 

ಫ್ರೆಶ್ ನ್ಯೂಸ್

Latest Posts

Featured Videos