ಚರಂಡಿ ದುರ್ವಾಸನೆಯಿಂದ ನಿವಾಸಿಗಳಿಗೆ ನರಕಯಾತನೆ

ಚರಂಡಿ ದುರ್ವಾಸನೆಯಿಂದ ನಿವಾಸಿಗಳಿಗೆ ನರಕಯಾತನೆ

ಮಧುಗಿರಿ: ಸ್ವಚ್ಛ ಭಾರತ್ ಅಭಿಯಾನ ನಡೆಸಿ ಮುಖ್ಯ ಸ್ಥಳಗಳಲ್ಲೇ ಅನೈರ್ಮಲ್ಯ ತಾಂಡವವಾಡಿದರೆ ಏನು ಬಂತು ಭಾಗ್ಯ?

ಇಲ್ಲಿನ ಪುರಸಭಾ ವ್ಯಾಪ್ತಿಯ ೧೩ನೇ ವಾರ್ಡಿನಲ್ಲಿರುವ ಚುನಾಯಿತ ಪುರಸಭೆಯ ಸದಸ್ಯ ಜೆ.ನರಸಿಂಹಮೂರ್ತಿ ಮನೆಯ ಮುಂಭಾಗ ಚರಂಡಿ ಕಟ್ಟಿಕೊಂಡಿದ್ದು ಮಳೆ ಬಂದರೆ ಚರಂಡಿಯ ನೀರು ಮನೆಗೆ ನುಗ್ಗುವ ಸ್ಥಿತಿಯಲ್ಲಿದೆ. ಈ ಕೊಳೆತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ, ಕ್ರಿಮಿಕೀಟಗಳಿಂದ ಜನತೆ ನಿತ್ಯ ತೊಂದರೆ ಅನುಭವಿಸುತ್ತಿದ್ದರೂ, ಮೋರಿ ಸ್ವಚ್ಛಗೊಳಿಸುವ ಗೋಜಿಗೇ ಪುರಸಭೆ ಹೋಗಿಲ್ಲ. ಮೋರಿಯಲ್ಲಿ ಗಲೀಜು ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಂತು ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದಾಗಿ ಮೋರಿಪಕ್ಕದ ನಿವಾಸಿಗಳ ಪಾಡು ಹೇಳ ತೀರದಾಗಿದೆ. ಚರಂಡಿಯ ತ್ಯಾಜ್ಯದಲ್ಲಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಮನೆ ಮುಂದೆಯೇ ಚರಂಡಿ ಇದ್ದು ಇದರ ದುರ್ವಾಸನೆಗೆ ಊಟ ಸೇರುತ್ತಿಲ್ಲ ಎಂದು ಅಕ್ಕ ಪಕ್ಕದ ಮನೆ ನಿವಾಸಿಗಳು
ಸವಿತಾ ಸಮಾಜದ ಸರ್ಕಾರಿ ಪಡಿತರ ವಿತರಣಾ ಕೇಂದ್ರದ ಮುಂಭಾಗ ನೂರಾರು ಪಡಿತರರು ಆಹಾರ ಪದಾರ್ಥಗಳನ್ನು ಪಡೆಯಬೇಕಾದಾಗ ದುರ್ವಾಸನೆ ಬಂದು ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಈ ಬಗ್ಗೆ ವಾರ್ಡಿನ ನಾಗರಿಕರು ಸಾಕಷ್ಟು ಬಾರಿ ಪುರಸಭೆಗೆ ತಿಳಿಸಿದರೂ ಕೂಡ ನೆಪಮಾತ್ರಕ್ಕೆ ಸ್ವಚ್ಛತೆ ಮಾಡಿ ನಂತರ ಕಟ್ಟಿಕೊಂಡ ಜಾಗವನ್ನು ಸಂಪೂರ್ಣ ಸ್ವಚ್ಛ ಮಾಡದ ಕಾರಣ ನೀರು ಕಟ್ಟಿಕೊಂಡು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಂಡಿದೆ.
ಇದೇ ರಸ್ತೆಯ ಎರಡೂ ಬದಿಯ ಚರಂಡಿಗಳು ಕಟ್ಟಿಕೊಂಡು. ದುರ್ನಾತ ಬೀರುತ್ತಿದೆ ಇದರಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಇದ್ದು, ಡಬ್ಬಲ್ ರೋಡ್ ನ ರಸ್ತೆಯಲ್ಲಿ ಚರಂಡಿ ನಿರ್ಮಾಣವಾಗದ ಕಾರಣ ಹದಿಮೂರು ಮತ್ತು ಹದಿನಾಲ್ಕು ನೇ ವಾರ್ಡಿನ ನಾಗರಿಕರು ರಸ್ತೆಯಲ್ಲಿ ಓಡಾಡಬೇಕಾದರೆ ಸಾಕಷ್ಟು ತೊಂದರೆಗಳು ಆಗುತ್ತಿದೆ.
ಸ್ವಚ್ಛತೆ ಮಾಡಿಸಬೇಕೆಂದು ಪುರಸಭೆಯ ಆಡಳಿತಾಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ. ಕೆ.ನಂದಿನಿದೇವಿ, ಮುಖ್ಯಾಧಿಕಾರಿ ಅಮರ್ ನಾರಾಯಣ್, ಪರಿಸತ ಅಭ್ಯಂತರೆ ಸೌಮ್ಯ, ಆರೋಗ್ಯ ನಿರೀಕ್ಷೆ ಬಾಲಾಜಿ ರವರುಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿ ಚರಂಡಿಗಳ ಸ್ವಚ್ಛತೆಗೆ ಶಾಶ್ವತ ಕ್ರಮಕೈಗೊಳ್ಳಬೇಕು ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos