ದುಬಾರಿಯಾಗುತ್ತ ಇಂದಿರಾ ಕ್ಯಾಂಟಿನ್ ಊಟ, ಉಪಹಾರ?

ದುಬಾರಿಯಾಗುತ್ತ ಇಂದಿರಾ ಕ್ಯಾಂಟಿನ್ ಊಟ, ಉಪಹಾರ?

ಬೆಂಗಳೂರು, ಫೆ. 29: ಬಡವರು ಒಂದು ಹೊತ್ತು ಊಟಕ್ಕಾಗಿ ಏಷ್ಟೆಲ್ಲಾ ಕಷ್ಟಪಡುತ್ತಾರೆ. ಬಡವರು ಕೂಲಿ ಮಾಡಿ ಚೆನ್ನಾಗಿರುವ ಹೋಟೆಲಲ್ಲಿ ಹೋಗಿ ಊಟ ಮಾಡಲು ಆಗುವುದಿಲ್ಲ ಅಂತ ಬಡವರಿಗೆಂದೇ ರಾಜ್ಯ ಸರ್ಕಾರ ಕೆಲವು ವರ್ಷಗಳ ಹಿಂದಿನಿಂದ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯನ್ನು ಆರಂಭಿಸಿದ್ದು, ಇಂದಿರಾ ಕ್ಯಾಂಟೀನ್ ವ್ಯವಸ್ಥೆಯು ಇಲ್ಲಿಯವರೆಗೂ ಯಾವ ತೊಂದರೆ ಇಲ್ಲದೆ ಮುನ್ನಡೆದಿದೆ. ಆದರೆ ಇಂದಿರಾ ಕ್ಯಾಂಟಿನ್ ಗ್ರಾಹಕರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ

ಹೌದು, ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಇಂದಿರಾ ಕ್ಯಾಂಟೀನ್ ಊಟ, ತಿಂಡಿ ದರ ಏರಿಕೆ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಇಂದಿರಾ ಕ್ಯಾಂಟೀನ್ ಗೆ ರಾಜ್ಯ ಸರ್ಕಾರವು ಕಳೆದ 1 ವರ್ಷದಿಂದ ಅನುದಾನ ನೀಡದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಊಟ, ಉಪಹಾರದ ದರ ಏರಿಕೆಗೆ ಮುಂದಾಗಿದೆ ಎನ್ನಲಾಗಿದ್ದು, ಸದ್ಯ ನೀಡಲಾಗುತ್ತಿರುವ ಊಟ ದರ 10 ರಿಂದ 15 ರೂ.ಗೆ ಉಪಹಾರದ ದರ 5 ರಿಂದ 10 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೊಸ ಗುತ್ತಿಗೆ ಜೊತೆಗೆ ಹೊಸ ದರ ಜಾರಿಗೆ ತರಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಇಂದಿರಾ ಕ್ಯಾಂಟೀನ್ ಗೆ ಸರ್ಕಾರ ಅನುದಾನ ನೀಡದ ಹಿನ್ನೆಲೆಯಲ್ಲಿ ಈಗ ಸರ್ಕಾರದ ಹೊರೆ ಇಳಿಸಲು ಮುಂದಾಗಿರುವ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಊಟ, ಉಪಹಾರದ ದರ 5 ರಿಂದ 10 ರೂ.ವರೆಗೆ ಏರಿಕೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos