ಉತ್ತಮ ಮೊತ್ತದತ್ತ ಭಾರತದ ಚಿತ್ತ

ಉತ್ತಮ ಮೊತ್ತದತ್ತ ಭಾರತದ ಚಿತ್ತ

ರಾಂಚಿ, ಅ. 19: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಂತಾರಾಷ್ಟ್ರೀಯ ನಡೆಯುತ್ತಿದ್ದು, ಲಂಚ್ ವಿರಾಮದ ಬೆನ್ನಲ್ಲೇ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಧನಾತ್ಮಕ ಚಿಂತನೆಯೊಂದಿಗೆ ಬ್ಯಾಟ್ ಬೀಸಿದರು. ಅಲ್ಲದೆ ರೋಹಿತ್ ಹಾಗೂ ರಹಾನೆ ಆಕರ್ಷಕ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಅತ್ತ ಒಂದೆಡೆ ವಿಕೆಟ್ ಗಳು ಪತನಗೊಳ್ಳುತ್ತಿದ್ದರೂ ಎಲ್ಲ ಒತ್ತಡಗಳನ್ನು ನಿಭಾಯಿಸಿದ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕದ ಸಾಧನೆ ಮಾಡಿದರು. ಇದು ತವರಿನಲ್ಲಿ ಆಡಿದ ಒಂಬತ್ತು ಇನ್ನಿಂಗ್ಸ್ಗಳ ಪೈಕಿ ರೋಹಿತ್ ಬ್ಯಾಟ್ನಿಂದ ಸಿಡಿದ ಎಂಟನೇ ಅರ್ಧಶತಕವಾಗಿದೆ. ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಿದ ಅಜಿಂಕ್ಯ ರಹಾನೆ ಕೂಡಾ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಇದರೊಂದಿಗೆ ದ್ವಿತೀಯ ಅವಧಿಯಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ದಕ್ಷಿಣ ಆಫ್ರಿಕಾ ಮೇಲೆ ಮೇಲುಗೈ ಸಾಧಿಸಿತು.

ಫ್ರೆಶ್ ನ್ಯೂಸ್

Latest Posts

Featured Videos