ಇಂಗ್ಲೆಡ್‌ ವಿರುದ್ದ ಭಾರತಕ್ಕೆ 434 ರನ್​ಗಳ ಭಾರಿ ಜಯ..!

ಇಂಗ್ಲೆಡ್‌ ವಿರುದ್ದ ಭಾರತಕ್ಕೆ 434 ರನ್​ಗಳ ಭಾರಿ ಜಯ..!

ಬೆಂಗಳೂರು: ರಾಜ್‌ಕೋಟ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್  ನಡುವಿನ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಗೆಲುವು ದಾಖಲಿಸಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ತಂಡ ಆಲ್ ರೌಂಡ್ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿತು. ಎರಡನೇ ಇನ್ನಿಂಗ್ಸ್​ನಲ್ಲಿ 557 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಂಗ್ಲರು ಭಾರತದ ಮಾರಕ ದಾಳಿಗೆ ತತ್ತರಿಸಿ ಕೇವಲ 122 ರನ್‌ಗಳಿಗೆ ಆಲೌಟ್ ಆದರು. ಇಂಗ್ಲೆಂಡ್ ತಂಡವನ್ನು 434 ರನ್​ಗಳಿಂದ ಮಣಿಸಿದ ಭಾರತ, ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದ ಇತಿಹಾಸ ನಿರ್ಮಿಸಿದೆ.

ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ 557 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಪರ ಒಬ್ಬನೇ ಒಬ್ಬ ಬ್ಯಾಟರ್ ಅರ್ಧಶತಕದ ಇನ್ನಿಂಗ್ಸ್ ಅಥವಾ ಬಿಗ್ ಇನ್ನಿಂಗ್ಸ್ ಆಡಲಿಲ್ಲ. ತಂಡದ ಪರ ಬಾಲಂಗೋಚಿ ಮಾರ್ಕ್​ವುಡ್ 15 ಎಸೆತಗಳಲ್ಲಿ 33 ರನ್ ಕಲೆಹಾಕಿದ್ದೆ ಅತ್ಯಧಿಕ ಮೊತ್ತವಾಯಿತು. ಉಳಿದಂತೆ ಟಾಮ್ ಹಾರ್ಟ್ಲಿ ಹಾಗೂ ಬೆನ್ ಪೋಕ್ಸ್ ತಲಾ 16 ರನ್ ಕಲೆಹಾಕಿದರೆ, ನಾಯಕ ಬೆನ್ ಸ್ಟೋಕ್ಸ್ 15 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರು. ಉಳಿದಂತೆ ತಂಡದ ಒಬ್ಬನೇ ಒಬ್ಬ ಬ್ಯಾಟರ್ ಒಂದಂಕಿ ದಾಟಲಿಲ್ಲ.

ಇಂಗ್ಲೆಂಡ್ ತಂಡವನ್ನು ಕೇವಲ 122 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಆಲ್​ರೌಂಡರ್ ರವೀಂದ್ರ ಜಡೇಜಾ ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 2, ಜಸ್ಪ್ರೀತ್ ಬುಮ್ರಾ ಹಾಗೂ ಆರ್​ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಶತಕ, ಬೌಲಿಂಗ್​ನಲ್ಲಿ 7 ವಿಕೆಟ್ ಪಡೆದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಫ್ರೆಶ್ ನ್ಯೂಸ್

Latest Posts

Featured Videos