ಕೊರೋನ ಪರೀಕ್ಷೆ ಹೆಚ್ಚಿಸಿ, ಕೊರೋನ ತೊಲಗಿಸಿ

ಕೊರೋನ ಪರೀಕ್ಷೆ ಹೆಚ್ಚಿಸಿ, ಕೊರೋನ ತೊಲಗಿಸಿ

ಬೆಂಗಳೂರು: ಬೊಮ್ಮನಹಳ್ಳಿ ಬಿಬಿಎಂಪಿ ವಲಯದಲ್ಲಿ ಕೊರೋನಾ ತಡೆಗಟ್ಟಲು ಹೆಚ್ಚಿನ ಪರೀಕ್ಷೆಗಳ ಅವಶ್ಯಕತೆ ಇದೆ ಎಂದು ಕೋವಿಡ್ ಉಸ್ತವಾರಿ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅಧಿಕಾರಿಗಳಿಗೆ ತಿಳಿಸಿದರು. ವಲಯದಲ್ಲಿರುವಂತಹ ವೈದ್ಯರು ಹಾಗೂ ಆರೋಗ್ಯಾಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಸೇವಾಕಾರ್ಯಕರ್ತರ ಸಹಕಾರದೊಂದಿಗೆ ಕಾರ್ಖಾನೆಗಳು, ಗಾರ್ಮೆಂಟ್‍ಗಳು, ವಸತಿಗೃಹಗಳು, ಮಾಲ್‍ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಪಾಸಣೆ ಏರ್ಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ತಪಾಸಣೆಯನ್ನು ಮಾಡದೇ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗುತ್ತದೆ. ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಜಂಟಿ ಆಯುಕ್ತ ರಾಮಕೃಷ್ಣ ಮಾತನಾಡಿ, ಕಳೆದ ಆರು ತಿಂಗಳುಗಳಿಂದ ನೌಕರರು ಸಾಕಷ್ಟು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಿಬಿಎಂಪಿ ಆಯುಕ್ತರ ಆದೇಶದಂತೆ ೫-೬ ಸಾವಿರ ಜನಕ್ಕೆ ತಪಾಸಣೆ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಡಾ. ನಾರಾಯಣಸ್ವಾಮಿ ಹಾಗೂ ಡಾ. ನಾಗೇಂದ್ರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos