ಪ್ರೇಮಮಯ ಕಥೆಯಲ್ಲಿ ‘ಸ್ವೀಟಿ

ಪ್ರೇಮಮಯ ಕಥೆಯಲ್ಲಿ ‘ಸ್ವೀಟಿ

ಬೆಂಗಳೂರು, ಡಿ. 11: ಕನ್ನಡ ಚಿತ್ರರಂಗದಲ್ಲಿ ‘ಸ್ವೀಟಿ’ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಆನಂತರ ‘ರುದ್ರತಾಂಡವ’, ‘ಕಾಂಟ್ರ್ಯಾಂಕ್ಟ್’ ಮತ್ತು ‘ದಮಯಂತಿ’ ಸಿನಿಮಾಗಳಲ್ಲಿ ನಟಿಸಿದರು. ಸದ್ಯ ‘ಭೈರಾದೇವಿ’ ಮತ್ತು ‘ರಾಜೇಂದ್ರ ಪೊನ್ನಪ್ಪ’ ಚಿತ್ರಗಳಲ್ಲಿ ಬ್ಯುಸಿಯಿರುವ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

ಹೌದು, ರಾಧಿಕಾ ಇದೀಗ ಲವ್ ಸ್ಟೋರಿ ಕಥಾಹಂದರದ ಚಿದಲ್ಲಿತ್ರ ನಟಿಸಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅವರು ನಟಿಸಿರುವ ‘ದಮಯಂತಿ’ ಚಿತ್ರವು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಸದ್ಯ ರಾಧಿಕಾ ನಟಿಸಲು ಒಪ್ಪಿಕೊಂಡಿರುವ ಚಿತ್ರವು ಪಕ್ಕಾ ಕಮರ್ಷಿಯಲ್ ಪ್ರೇಮಮಯ ಚಿತ್ರವಾಗಿದ್ದು, ಅವರು ಮತ್ತೆ ಹಳೇ ಅವತಾರದಲ್ಲಿ, ಮುದ್ದು ಮುಖದೊಂದಿಗೆ ಎದುರಾಗಲಿದ್ದಾರಂತೆ. ಅಂದರೆ, ನಾಯಕಿಯಾಗಿ ತೆರೆಮೇಲೆ ಮಿಂಚಲಿದ್ದು, ಲವ್ ಸ್ಟೋರಿ, ಸೆಂಟಿಮೆಂಟ್, ಕಾಮಿಡಿ ಹೀಗೆ ಎಲ್ಲ ಅಂಶಗಳಿರುವ ಕಥೆಯನ್ನು ಹಿಡಿದು ಆಗಮಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ಈ ಚಿತ್ರವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡಲಿದ್ದು, ಸದ್ಯದಲ್ಲಿಯೇ ಚಿತ್ರದ ಹೆಸರು ಮತ್ತು ಉಳಿದ ವಿವರಗಳು ಬಹಿರಂಗವಾಗಲಿವೆ ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos