2019ರ ವಿಶ್ವಕಪ್ ವೇಳೆ ಭಾರತಕ್ಕೆ ಭದ್ರತೆಯ ಭರವಸೆ ನೀಡಿದ ಐಸಿಸಿ

2019ರ ವಿಶ್ವಕಪ್ ವೇಳೆ ಭಾರತಕ್ಕೆ ಭದ್ರತೆಯ ಭರವಸೆ ನೀಡಿದ ಐಸಿಸಿ

ನವದೆಹಲಿ, ಫೆ.27,
ನ್ಯೂಸ್‍
ಎಕ್ಸ್ ಪ್ರೆಸ್‍:
ಪುಲ್ವಾಮಾ
ದಾಳಿಗೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್
ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)
2019ರ ವಿಶ್ವಕಪ್ ಪಂದ್ಯದ ಸಂದರ್ಭ ಭದ್ರತೆಯ
ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಪಂದ್ಯದ
ವೇಳೆ ಭದ್ರತೆ ಒದಗಿಸುವ ಭರವಸೆಯನ್ನು
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೀಡಿದೆ.

ಐಸಿಸಿ ಮುಖ್ಯ ಕಾರ್ಯದರ್ಶಿಗಳ ಸಮಿತಿ ಸಭೆಯಲ್ಲಿ (ಸಿಇಸಿ) ಬಿಸಿಸಿಐ ಸಿಇಓ ರಾಹುಲ್ ಜೋಹ್ರಿ ಅವರು, ಮೇ 30ರಿಂದ ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಆಟಗಾರರ ಭದ್ರತೆ ಬಗ್ಗೆ ವಿಚಾರ ಪ್ರಾಸ್ತಾಪಿಸಿದರು.

ಪುಲ್ವಾಮಾ ದಾಳಿಯಿಂದಾಗಿ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಬಿಗುವಿನ ವಾತಾವರಣವಿರುವುದು ಇದಕ್ಕೆ ಕಾರಣವಾಗಿತ್ತು. ‘ಜೋಹ್ರಿ ಅವರು ವಿಶ್ವಕಪ್ ವೇಳೆ ಭಾರತ ತಂಡ, ಅಧಿಕಾರಿಗಳು ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಭದ್ರತೆ ಬಗ್ಗೆ ಪ್ರಾಸ್ತಾಪಿಸಿದ್ದರು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ, ಭದ್ರತಾ ಕ್ರಮಗಳನ್ನು ಕೈಗೊಂಡ ಬಳಿಕ ಐಸಿಸಿಯು ಈ ಬಗ್ಗೆ ಬಿಸಿಸಿಐಗೆ ಖಾತರಿಪಡಿಸಲಿದೆ ಎಂದು ಐಸಿಸಿ ಸಿಇಒ ಡೇವಿಡ್ ರಿಚರ್ಡ್ಸನ್ ಬಿಸಿಸಿಐಗೆ ತಿಳಿಸಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos