ಅತೀ ಹೆಚ್ಚು ಮತಗಳಿಂದ ‘ಗೆದ್ದು ಬೀಗಿದ’ ನಾಯಕರು..!

ಅತೀ ಹೆಚ್ಚು ಮತಗಳಿಂದ ‘ಗೆದ್ದು ಬೀಗಿದ’ ನಾಯಕರು..!

ನವದೆಹಲಿ, ಮೇ.21, ನ್ಯೂಸ್‍ ಎಕ್ಸ್ ಪ್ರೆಸ್‍: 17 ನೇ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ವಿಜಯಪತಾಕೆ ಹಾರಿಸಿದೆ. ಕರ್ನಾಟಕದಲ್ಲಿ ಬಿಜೆಪಿಯ ವಿರುದ್ಧ ಗೆಲ್ಲಲು ಮೈತ್ರಿಯ ಮೊರೆ ಹೋಗಿದ್ದ ಕಾಂಗ್ರೆಸ್​-ಜೆಡಿಎಸ್​ಗೆ ಭಾರೀ ಮರ್ಮಾಘಾತ ಉಂಟಾಗಿದೆ. ಕಾಂಗ್ರೆಸ್​ ಒಂದು ಹಾಗೂ ಜೆಡಿಎಸ್​ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೇರಿದಂತೆ ಹಲವರು ಭಾರೀ ಅಂತರದಿಂದ ಗೆದ್ದಿದ್ದಾರೆ. ಕರ್ನಾಟಕದಲ್ಲೂ ಇದಕ್ಕೆ ಕಮ್ಮಿಯಿಲ್ಲ.

ನರೇಂದ್ರ ಮೋದಿ: ವಾರಣಾಸಿಯಿಂದ ಸ್ಪರ್ಧೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಮೋದಿಗೆ 5.71 ಲಕ್ಷ ಮತಗಳು ಬಿದ್ದರೆ, ಎಸ್​​ಪಿ ಅಭ್ಯರ್ಥಿ ಶಾಲಿನಿ ಯಾದವ್​ಗೆ 1.65 ಲಕ್ಷ ಮತಗಳು ಬಿದ್ದಿವೆ. ಕಾಂಗ್ರೆಸ್​ ಅಭ್ಯರ್ಥಿ ಅಜಯ್​ 1.14 ಲಕ್ಷ ಮತ ಪಡೆದಿದ್ದಾರೆ. ಕಳೆದಬಾರಿ ಮೋದಿ ವಡೋದರಲ್ಲಿ 5.70 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

ಅಮಿತ್ ಶಾ: ಎಲ್​ಕೆ ಆಡ್ವಾಣಿ ಕ್ಷೇತ್ರವಾಗಿದ್ದ ವಡೋದರವದಲ್ಲಿ ಅಮಿತ್​ ಷಾ ಸ್ಪರ್ಧೆ ಮಾಡಿದ್ದರು. ಇವರು ಬರೋಬ್ಬರಿ 5.43 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಅಮಿತ್​ ಶಾಗೆ 8.74 ಲಕ್ಷ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ಸಿಡಿ ಚವ್ಡಾ 3.30 ಲಕ್ಷ ಮತ ಪಡೆದಿದ್ದರು. ಕಳೆದಬಾರಿ ಅವರು ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಿರಲಿಲ್ಲ.

ರಾಹುಲ್ ಗಾಂಧಿ: ಅಮೇಥಿಯಲ್ಲಿ ರಾಹುಲ್​ ಸೋಲುವ ಸ್ಥಿತಿ ತಲುಪಿದ್ದಾರೆ. ಆದರೆ, ಕೇರಳದ ವಯನಾಡಿನಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ. ರಾಹುಲ್​ ಸಿಪಿಐ ಪಿಪಿ ಸುನೀರ್​ ವಿರುದ್ಧ ಬರೋಬ್ಬರಿ 4 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

ಅನಂತ್​ ಕುಮಾರ್​ ಹೆಗಡೆ: ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ 6ನೇ ಬಾರಿಗೆ ಅನಂತ್​ಕುಮಾರ್​ ಹೆಗಡೆ ಗೆಲುವು ಸಾಧಿಸಿದ್ದಾರೆ. 7.69 ಲಕ್ಷ ಮತಗಳನ್ನು ಅವರು ಪಡೆದರೆ ಮೈತ್ರಿ ಅಭ್ಯರ್ಥಿ ಆನಂದ್​ ಅಸ್ನೋಟಿಕರ್​ 3 ಲಕ್ಷ ಮತ ಪಡೆದಿದ್ದಾರೆ. ಈ ಮೂಲಕ 4.68 ಲಕ್ಷ ಅಂತರದ ಬೃಹತ್​ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಕೇವಲ 1.40 ಲಕ್ಷ ಮತಗಳಿಂದ ಅವರು ಗೆದ್ದಿದ್ದರು.

ನಳೀನ್ ಕುಮಾರ್ ಕಟೀಲ್‍: ಮಂಗಳೂರಿನಿಂದ ಸ್ಪರ್ಧಿಸಿದ್ದ ನಳೀನ್​ ಕುಮಾರ್​ ಕಟೀಲು 2.80 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ನಳೀನ್​ ಅವರಿಗೆ 7.59 ಲಕ್ಷ ಹಾಗೂ ಕಾಂಗ್ರೆಸ್​ನ ಮಿಥುನ್​ರೈಗೆ 4.86 ಲಕ್ಷ ಮತ ಬಿದ್ದಿವೆ.

ರಮೇಶ್ ಜಿಗಜಿಣಗಿ: ರಮೇಶ್​ ಜಿಗಜಿಣಗಿ ವಿಜಯಪುರದಿಂದ ಗೆಲುವು ಸಾಧಗಿಸಿದ್ದಾರೆ. ಈ ಬಾರಿ 258038 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರಿಗೆ 6.35 ಲಕ್ಷ ಮತ ಹಾಗೂ  ಪ್ರತಿಸ್ಪರ್ಧಿ ಡಾ. ಸುನೀತಾ ದೇವಾನಂದ ಚವ್ಹಾಣ (ಜೆಡಿಎಸ್) 3.77 ಲಕ್ಷ ಮತ ಪಡೆದಿದ್ದಾರೆ.

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos