ವಾಸ್ತು ಶಿಲ್ಪದ ಪಾರಂಪರಿಕ ಹೋಟೆಲ್ ಲಲಿತ ಮಹಲ್

ವಾಸ್ತು ಶಿಲ್ಪದ ಪಾರಂಪರಿಕ ಹೋಟೆಲ್ ಲಲಿತ ಮಹಲ್

ಮೈಸೂರು, ಸೆ.16: ಲಲಿತ ಮಹಲ್ ಮೈಸೂರಿನ ಅರಮನೆಗಳಲ್ಲಿ ಒಂದು. ಎರಡನೇ ಅತಿದೊಡ್ಡ ಅರಮನೆ. ಮೈಸೂರು ಎಂಬ ನಗರದ ಪೂರ್ವ ದಿಕ್ಕಿನಲ್ಲಿ ಮಹಲ್ ಕಂಡು ಬರುತ್ತದೆ. ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯ ಎಡ ಭಾಗದಲ್ಲಿದೆ.

ಲಲಿತ ಮಹಲ್ ನಗರದಿಂದ 11ಕಿ.ಮೀ. ದೂರದಲ್ಲಿ ನೆಲೆಗೊಂಡಿದೆ. ಅರಮನೆಯು ನಾಲ್ವಡಿ ಕೃಷ್ಣರಾಜ ಒಡೆಯರ್  1921ರಲ್ಲಿ ನಿರ್ಮಿಸಲಾಯಿತು. ಮಹಾರಾಜರು ಆಗಿನ ಭಾರತದ ವೈಸ್ರಾಯ್’ಗಳಿಗೆ ಉಳಿಯಲಿಕ್ಕೆಂದೇ ನಿರ್ಮಿತವಾಯಿತು. ಎತ್ತರದ ಪ್ರದೇಶದ ಮೇಲೆ ಕಟ್ಟಲಾಗಿದ್ದು, ಲಂಡನ್’ನ ‘ಸಂತ ಪಾಲ್ಸ್ ಆರಾಧನ ಮಂದಿರ’ ರಚನೆಗೊಂಡ ಸಾಲುಗಳ ವಿನ್ಯಾಸವನ್ನು ಲಲಿತ ಮಹಲ್ ಅರಮನೆಗೆ ರೂಪಿಸಿದ್ದಾರೆ.

ಶುದ್ಧ ಬಿಳಿ ಬಣ್ಣದಿಂದ ಅಲಂಕೃತ ಮಾಡಿದ್ದಾರೆ. 1974ರಲ್ಲಿ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಯಿತು.

ಭಾರತ ಸರ್ಕಾರದ ಅಡಿಯಲ್ಲಿ ‘ಭಾರತದ ಅಶೋಕ ಗ್ರೂಪ್’ನ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ’ದವರು ಗಣ್ಯ(ಎಲೈಟ್) ಹೋಟೆಲ್’ನ್ನಾಗಿ ನಡೆಸುತ್ತಿದ್ದಾರೆ.

 

 

ನಾಲ್ವಡಿ ಕೃಷ್ಣರಾಜ ಒಡೆಯರ್ ಇಪತ್ನಾಲ್ಕನೇ ರಾಜನಾಗಿ ಒಡೆಯರ್ ವಂಶವನ್ನು ಆಳಿದರು. ಮೈಸೂರು ರಾಜರನ್ನು, ಕಲೆ ಮತ್ತು ವಾಸ್ತುಶಿಲ್ಪದ ಮಹಾನ್ ಪಂಡಿತರೆಂದು ಪರಿಗಣಿಸಲಾಗಿತ್ತು. ಆಡಳಿತದ ಶೈಲಿಯನ್ನು ಆಡಂಬರದಿಂದ ಮಾಡುತ್ತಿದ್ದರು. ರಾಜ್ಯದ ವಾಸ್ತುಶಿಲ್ಪದ ಪರಂಪರೆಯ

ಲಲಿತ ಮಹಲ್ ಅರಮ
ವಾಸ್ತುಶಿಲ್ಪ
ನ್ನು ಹೆಚ್ಚಿಸಲು ನಿರ್ಮಿಸಿದ ಸುಂದರ ಸ್ಮಾರಕಗಳಾದ ಅರಮನೆಗಳು, ದೇವಾಲಯಗಳು, ಚರ್ಚ್’ಗಳು, ತೋಟಗಳು ಮತ್ತು ಇತರೆ ಸ್ಮಾರಕಗಳು ಸಾಕ್ಷಿಗಳಾಗಿವೆ. ಲಲಿತ ಮಹಲ್ ಅರಮನೆಯನ್ನು ಆಗಿನ ಭಾರತದ ವೈಸ್ರಾಯ್ ಹಾಗೂ ಮಹಾರಾಜರ ಯುರೋಪಿಯನ್ ಅತಿಥಿಗಳಿಗೆ ಉಳಿಯಲು ಅತಿಥಿ ಗೃಹವೆಂದು 1921ರಲ್ಲಿ ನಿರ್ಮಿಸಲಾಯಿತು.

ನೆಯ ಯೋಜನೆಯನ್ನು ಲಂಡನಿನ ಸಂತ ಪಾಲ್ಸ್ ಆರಾಧನಾ ಮಂದಿರ(ಸಂತ ಪಾಲ್ಸ್ ಕ್ಯಾಥೆಡ್ರಲ್)ನಿನ ವಾಸ್ತುಶಿಲ್ಪದ ಶೈಲಿಯ ತರಹ ರೂಪಿಸಲಾಗಿದೆ. ಬಿ.ಮುನಿವೆಂಕಟಪ್ಪ ನಿರ್ಮಾಣ ಮಾಡಿದರು. ಲಂಡನಿನ ಸಂತ ಪಾಲ್ಸ್ ಕ್ಯಾಥೆಡ್ರಲ್’ನಲ್ಲಿರುವ ಕೇಂದ್ರ ಗುಮ್ಮಟವನ್ನು ವಿಶೇಷವಾಗಿ ಲಲಿತ ಮಹಲ್ ಅರಮನೆಯಲ್ಲಿ ಪ್ರತಿಬಿಂಬಿಸಿದ್ದಾರೆ. ಆಧಾರಿತವಾಗಿ 19 ಮತ್ತು 20ನೇ ಶತಮಾನದಲ್ಲಿ

ನವೋದಯದ ಇಟಾಲಿಯನ್ ಶ್ರೀಮಂತ ಕುಟುಂಬಗಳು ಈ ಶೈಲಿಯ ಮನೆ ಅಥವಾ ಅರಮನೆಗಳನ್ನು ನಿರ್ಮಿಸುತ್ತಿದ್ದರು.) ಲಲಿತ ಮಹಲ್ ಅರಮನೆಯು ಎರಡು ಅಂತಸ್ತಿನ ಅರಮನೆಯಾಗಿದೆ.

 

 

ಅರಮನೆ ನೆಲಮಟ್ಟದಿಂದ ವಿಸ್ತಾರವಾಗಿರುವ ದ್ವಾರಮಂಟಪವನ್ನು ಹೊಂದಿದೆ. ಗೋಳಾಕಾರದ ಗುಮ್ಮಟಗಳು ಅರಮನೆಗೆ ಹೆಚ್ಚಿನ ಮೆರುಗನ್ನು ಕೊಡುತ್ತವೆ ಮತ್ತು ಗುಮ್ಮಟಗಳ ಮಧ್ಯದಲ್ಲಿ ತೂಗುದೀಪಗಳನ್ನು ಅಳವಡಿಸಿದ್ದಾರೆ.

ವೈಸ್ರಾಯ್ ಕೊಠಡಿ:

ಔತಣಂಗಣ ಹಾಗೂ ನೃತ್ಯ ಮಂಟಪವನ್ನು ಕಾಣಬಹುದಾಗಿದೆ. ಮೆಟ್ಟಿಲುಗಳನ್ನು ಇಟಾಲಿಯನ್ ಶೈಲಿಯ ಅಮೃತಶಿಲೆ ಕಲ್ಲಿನ ಬಳಿಕೆಯಿಂದ ಕಟ್ಟಲಾಗಿದೆ. ಅಲಂಕಾರಿಕ ಸಾಮಗ್ರಿಗಳು ಬ್ರಿಟನಿನ ವಿವಿಧ ಅರಮನೆಗಳಿಂದ ಪ್ರತಿಕೃತಿಯಾಗಿದೆ.

 ಪರಂಪರೆಯ ಭಾವಚಿತ್ರಗಳು

ಬ್ರಿಟಿಷರೊಂದಿಗೆ ಟಿಪ್ಪು ಸುಲ್ತಾನಿನ ಕದನಗಳ ಶಿಲಾಮುದ್ರಣಗಳು, ಅರಮನೆಯ ಗೋಡೆಗಳಲ್ಲಿ ಹಾಗೂ ಛಾವಣಿಗಳಲ್ಲಿ ತುಂಬಿದ ಚಿತ್ರ ಕಲೆಗಳು, ಇಟಾಲಿಯನ್ ಅಮೃತಶಿಲೆಯ ಮಹಡಿಗಳು, ಬೆಲ್ಜಿಯನ್ ಹರಳಿನ ತೂಗುದೀಪಗಳು, ಗಾಜಿನ ದೀಪಗಳು, ವಿಧ ವಿಧದ ಪೀಠೋಪಕರಣಗಳು ಹಾಗೂ ಬೀಟೆ ಮರದ ಪೀಠೋಪಕರಣಗಳು, ಕೆತ್ತಿದ ಮರದ ಕಪಾಟುಗಳು ಹಾಗೂ ಗೋಡೆಯ ಫಲಕಗಳು, ಮೊಸೈಕ್ ಟೈಲ್ಸ್’ಗಳು(ವಿವಿಧ ಬಣ್ಣದ ಸಣ್ಣ ಗಾಜಿರುವ ಕಲ್ಲಿನ ಚೂರಗಳನ್ನು ಜೋಡಿಸಿ ಮಾಡಿದ ಟೈಲ್ಸ್), ಆಕರ್ಷಕವಾದ ಪರ್ಶಿಯನ್ ರತ್ನಗಂಬಳಿಗಳು, ಅರಮನೆಗೆ ರಾಜವೈಭವದ ಕಳೆಯನ್ನು ಕೊಡುತ್ತದೆ.

ವೃತ್ತಾಕಾರದ ಕೊಠಡಿಯನ್ನು ಈಗಿನ ಹೋಟೆಲಿನ ಭೋಜನ ಗೃಹವನ್ನಾಗಿ ಪರಿವರ್ತನೆ ಮಾಡಿದ್ದಾರೆ

ಸೌಕರ್ಯ

ಲಲಿತ ಮಹಲ್ ಹೋಟೆಲಿನ ಅ

ವಶ್ಯಕತೆಗೆ ತಕ್ಕಂತೆ ಒಳಾಂಗಣವನ್ನು ತಮ್ಮ ಅನೂಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡರು. ಹಳೆಯ ನೆಲವಸ್ತುಗಳು, ಪೀಠೋಪಕರಣಗಳು, ಲಿಫ್ಟ್’ಗಳು, ಭಾವಚಿತ್ರಗಳನ್ನು ಜಾಗೃತೆಯಿಂದ ನಿರ್ವಹಿಸುತ್ತಿದ್ದಾರೆ.

ವಿಶಾಲವಾದ ಉದ್ಯಾನವನ್ನು ಆರೈಕೆ ಮಾಡಲು ಕಷ್ಟವಾದ್ದರಿಂದ, ಚಿಕ್ಕದಾಗಿ ಮಾಡಿ ಕಾರಂಜಿ ಹಾಗೂ ವಾಹನ ನಿಲುಗಡೆಗೆ ಸೌಕರ್ಯ ನೀಡಿ, ಆರೈಕೆ ಮಾಡುತ್ತಿದ್ದಾರೆ. ಅರಮನೆಯ ಆಚೆ ಇರುವ ಹುಲ್ಲುಹಾಸಿಗೆಯಲ್ಲಿ(ಲಾನ್) ಸಂಜೆಯ ಹೊತ್ತಿನಲ್ಲಿ ಚಹಾ ಕುಡಿಯಲು ಅಥವಾ ಸಣ್ಣ ಸಮಾರಂಭಗಳನ್ನು(ಕಾಕ್ಟೇಲ್ ಪಾರ್ಟಿ) ನಡೆಸುವ ವ್ಯವಸ್ಥೆ ಮಾಡಿದ್ದಾರೆ.

 

ಹೋಟೆಲ್ಲಿನ ಅನುಭವ

ಹೋಟೆಲ್ಲಿನ ಅನುಭವವು ರಾಜನ ಅನುಭವವನ್ನು ನೀಡುತ್ತದೆ. ರಾಜನಿಗೆ ಹೇಗೆ ಸೌಕರ್ಯ ಸಿಗುತ್ತಿತ್ತೋ ಹಾಗೆಯೇ ಅಲ್ಲಿ ಉಳಿದಕೊಂಡವರಿಗೆ ಸಿಗುತ್ತದೆ. ರಾಜ ಅತಿಥಿಗಳಿಗೆ ಮೀಸಲಾದ ಈ ಅರಮನೆ ಈಗ ಸರ್ಕಾರದ “ಭಾರತ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ” (ಐ.ಟಿ.ಡಿ.ಸಿ)ಯವರು ಪಂಚತಾರ ಹೋಟೆಲ್ಲಾಗಿ ಪರಿವರ್ತಿಸಿದ್ದಾರೆ

ಉಪಾಹಾರ ಗೃಹ

ವೈವಿದ್ಯಮಯ ಅಡುಗೆಯ ಬಗೆಯುಳ್ಳ ರೆಸ್ಟೋರೆಂಟ್, ವಾದ್ಯ ಸಂಗೀತದ ನೇರಪ್ರಸಾರದಲ್ಲಿ ಊಟದ ವ್ಯವಸ್ಥೆ(ಮಧ್ಯಾಹ್ನ ಮತ್ತು ರಾತ್ರಿ ಊಟ) ಹಾಗೂ ವಾರಾಂತ್ಯದಲ್ಲಿ ಬಫಟ್ ಊಟದ ವ್ಯವಸ್ಥೆ ಇದೆ.

ವಿಶೇಷತೆ

ಲಲಿತ ಮಹಲ್ ಅರಮನೆ ಹಾಗು ಹೋಟೆಲಿನ ವಿಶೇಷತೆಗಳೆಂದರೆ, ಗಣ್ಯವ್ಯಕ್ತಿಗಳ ಅದ್ದೂರಿಯಾದ ಮದುವೆ ಸಮಾರಂಭಗಳಿಗೆ ಸೂಕ್ತ ಸ್ಥಳ. ಗಣ್ಯವ್ಯಕ್ತಿಗಳ ಹಾಗೂ ಸಚಿವರ ಸಭೆ, ಸಮಾರಂಭಗಳು ನಡೆಯುತ್ತವೆ. ಚಲನಚಿತ್ರ ಹಾಗೂ ಧಾರಾವಾಹಿಗಳನ್ನು ಚಿತ್ರಿಕರಿಸಲಾಗಿದೆ. ಅರಮನೆಯ ಸಮೀಪದಲ್ಲಿರುವ ಹೆಲಿಪ್ಯಾಡ್’ನಲ್ಲಿ ನೂರಕ್ಕಿಂತ ಹೆಚ್ಚಿನ ಚಿತ್ರಗಳ ಚಿತ್ರಿಕರಣ ಮಾಡಿದ್ದಾರೆ.

ವರದಿ:ವೀರಭದ್ರಯ್ಯ

 

ಫ್ರೆಶ್ ನ್ಯೂಸ್

Latest Posts

Featured Videos