ಹೆಂಡಿರ ಮಧ್ಯೆ ಸಿಲುಕಿ ಗಂಡ ಮಾಡಿದ್ದೇನು?

ಹೆಂಡಿರ ಮಧ್ಯೆ ಸಿಲುಕಿ ಗಂಡ ಮಾಡಿದ್ದೇನು?

ಏ. 9 : ವಿಶ್ವಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಹೆಚ್ಚುತ್ತಿರುವುದರಿಂದ ಜನರು ನಾನಾ ಈತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಹುತೇಕ ದೇಶಗಳಲ್ಲಿ ಲಾಕ್ಡೌನ್ ಘೋಷಿಸಿರುವುದರಿಂದ ಮನೆಯಿಂದ ಹೊರಬಾರದ ಸ್ಥಿತಿ ಎದುರಾಗಿದೆ. ದಿನನಿತ್ಯದ ವಸ್ತುಗಳಿಗೆ, ಊಟಕ್ಕೆ ಪರದಾಡುತ್ತಿರುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ, ದುಬೈನ ವ್ಯಕ್ತಿಯೋರ್ವನಿಗೆ ಲಾಕ್ಡೌನ್ನಿಂದಾಗಿ ಹೊಸ ಸಮಸ್ಯೆ ಶುರುವಾಗಿದೆ. ತನ್ನ ಇಕ್ಕಟ್ಟಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಂತೆ ಆತ ಪೊಲೀಸರ ಮೊರೆ ಹೋಗಿದ್ದಾನೆ. ಅಷ್ಟಕ್ಕೂ ಆತನಿಗೆ ಆಗಿರುವ ತೊಂದರೆಯಾದರೂ ಏನು ಅಂತೀರಾ?

ದುಬೈನಲ್ಲಿ ಲಾಕ್ಡೌನ್ ಇರುವುದರಿಂದ ಸಾರ್ವಜನಿಕರಿಗೆ ಏನಾದರೂ ಸಮಸ್ಯೆಯಿದ್ದರೆ ನಾವು ಬಗೆಹರಿಸುತ್ತೇವೆ ಎಂದು ಅಲ್ಲಿನ ಪೊಲೀಸರು ರೇಡಿಯೋ ಕಾರ್ಯಕ್ರಮದಲ್ಲಿ ಲೈವ್ನಲ್ಲಿದ್ದರು. ಲೈವ್ನಲ್ಲಿದ್ದ ಪೊಲೀಸರ ಬಳಿ ಜನರು ತಮ್ಮ ಗೊಂದಲ, ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಆಗ ಫೋನ್ ಮಾಡಿದ ವ್ಯಕ್ತಿಯೋರ್ವ ತನ್ನ ವಿಚಿತ್ರವಾದ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos