ಇತ್ತೀಚೆಗೆ ಹೆಚ್ಚಿನ ಕನ್ನಡಿಗರು ಶ್ರೀಲಂಕಾಗೆ ಹೋಗುವುದೇಕೆ ಗೊತ್ತಾ!?

ಇತ್ತೀಚೆಗೆ ಹೆಚ್ಚಿನ ಕನ್ನಡಿಗರು ಶ್ರೀಲಂಕಾಗೆ ಹೋಗುವುದೇಕೆ ಗೊತ್ತಾ!?

ಬೆಂಗಳೂರು, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಭಾರತದಿಂದ ವಿದೇಶ ಪ್ರವಾಸ ಹೋಗುವವರಲ್ಲಿ ಶೇ.12ರಿಂದ 14ರಷ್ಟುಪ್ರವಾಸಿಗರು ಶ್ರೀಲಂಕಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಬೆಂಗಳೂರು ಮತ್ತು ಕರ್ನಾಟಕದ ಭಾಗದಿಂದ ಹೋಗುವವರಲ್ಲಿ ಶೇ.8ರಿಂದ 10ರಷ್ಟುಮಂದಿ ಶ್ರೀಲಂಕಾಕ್ಕೆ ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ಸಂಸ್ಥೆಗಳ ಮಾಹಿತಿ ಪ್ರಕಾರ ಬೆಂಗಳೂರು ಹಾಗೂ ಕರ್ನಾಟಕದ ಭಾಗದಿಂದ ಪ್ರತಿ ತಿಂಗಳು ಸುಮಾರು ಐದು ಸಾವಿರ ಮಂದಿ ಇಲ್ಲಿಗೆ ಪ್ರವಾಸ ತೆರಳುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ, ಬೆಂಗಳೂರಿಗರು ಹೀಗೆ ಶ್ರೀಲಂಕಾಕ್ಕೆ ಭೇಟಿ ನೀಡಲು ಪ್ರಮುಖ ಕಾರಣ ಕ್ಯಾಸಿನೋಗಳು ಅರ್ಥಾತ್‌ ಜೂಜು ಅಡ್ಡೆಗಳು! ನಡುಗಡ್ಡೆ ರಾಷ್ಟ್ರದ ರಮಣೀಯ ಕಡಲ ಕಿನಾರೆಗಳು, ದಟ್ಟವಾದ ಕಾಡು, ಜಲಪಾತ, ವನ್ಯಧಾಮಗಳು ಒಂದೆಡೆಯಾದರೆ, ಮತ್ತೊಂದೆಡೆ ಧಾರ್ಮಿಕ ಕ್ಷೇತ್ರಗಳು ಮತ್ತು ಕ್ಯಾಸಿನೋಗಳು ಕೂಡ ಭಾರತೀಯ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪೋಕರ್‌, ಕ್ರಾಫ್ಸ್‌, ಬ್ಲಾಕ್‌ ಜ್ಯಾಕ್‌ ಕಿನೋ, ಸ್ಲಾಟ್‌ ಹೌಸ್‌ ಎಡ್ಜ್‌ನಂತಹ ಜೂಜು ಆಡಲು ಬೆಂಗಳೂರಿನಿಂದ ದೊಡ್ಡ ಸಂಖ್ಯೆಯ ಪ್ರವಾಸಿಗರು ಶ್ರೀಲಂಕಾಗೆ ತೆರಳುತ್ತಾರೆ. ಬೆಂಗಳೂರಿನ ಕ್ಯಾಸಿನೋ ಪ್ರಿಯರಿಗೆ ತಮ್ಮ ನೆಚ್ಚಿನ ಜೂಜು ಆಡಲು ಇರುವ ಸಮೀಪದ ತಾಣ ಗೋವಾ. ಗೋವಾ ಹೊರತುಪಡಿಸಿದರೆ ಶ್ರೀಲಂಕಾವೇ ಅತ್ಯಂತ ಸಮೀಪ. ಇನ್ನು ಗೋವಾಗೆ ಹೋಲಿಸಿದರೆ ಶ್ರೀಲಂಕಾದಲ್ಲಿ ತಂಗುವ ವ್ಯವಸ್ಥೆ ಅಗ್ಗ. ಅಷ್ಟೇ ಅಲ್ಲ, ಗೋವಾಗೆ ಹೋಲಿಸಿದರೆ ಶ್ರೀಲಂಕಾದ ಜೂಜು ಅಡ್ಡೆಗಳಲ್ಲಿ ಗೆಲ್ಲುವ ಅವಕಾಶ ಹೆಚ್ಚು ಎನ್ನಲಾಗುತ್ತದೆ. ಹೀಗಾಗಿ ನಗರದ ಜೂಜುಪ್ರಿಯರು ಶ್ರೀಲಂಕಾವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಕೇವಲ ಬೆಂಗಳೂರಿನ ಕಥೆ ಮಾತ್ರವಲ್ಲ. ಭಾರತದಿಂದ ಶ್ರೀಲಂಕಾಗೆ ಅತಿ ಹೆಚ್ಚಿನ ಮಂದಿ ಕ್ಯಾಸಿನೋಗಾಗಿ ಭೇಟಿ ನೀಡುತ್ತಾರೆ. ಒಂದು ಮಾಹಿತಿ ಪ್ರಕಾರ ಶ್ರೀಲಂಕಾಗೆ ಭೇಟಿ ನೀಡುವ ಭಾರತೀಯರ ಪೈಕಿ ಶೇ.18 ಮಂದಿಯ ಉದ್ದೇಶ ಕ್ಯಾಸಿನೋದಲ್ಲಿ ಜೂಜು ಆಡುವುದು!

ಫ್ರೆಶ್ ನ್ಯೂಸ್

Latest Posts

Featured Videos