ಹುಬ್ಬಳ್ಳಿಯಲ್ಲಿ ತಟ್ಟಲಿಲ್ಲ ಬಂದ್ ಬಿಸಿ

ಹುಬ್ಬಳ್ಳಿಯಲ್ಲಿ ತಟ್ಟಲಿಲ್ಲ ಬಂದ್ ಬಿಸಿ

ಹುಬ್ಬಳ್ಳಿ, ಫೆ. 20: ಬಿಎಂಟಿಸಿ  ಮತ್ತು  ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಲ್ಲಾ ನೌಕರರನ್ನು ಸರ್ಕಾರಿ ನೌಕರರನ್ನಾಗಿ ನೇಮಕ ಮಾಡಬೇಕು ಎಂದು ಪ್ರತಿಭಟನೆಯ ಹಿನ್ನಲೆ ಹುಬ್ಬಳ್ಳಿಯಲ್ಲಿ ಎಂದಿನಂತೆ ಬಸ್ ಗಳು ಸಂಚಾರ ನಡೆಸುತ್ತಿವೆ. ಯಾವುದೇ ರೀತಿಯ ಬಂದ್ ಬಿಸಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆಗೆ ತಟ್ಟಲಿಲ್ಲ. ಪ್ರಮುಖವಾಗಿ ಸಾರಿಗೆ ಸಂಸ್ಥೆಯನ್ನು ಸರ್ಕಾರದಲ್ಲಿ ವೀಲೀನ ಗೊಳಿಸಬೇಕು ಎಂಬುದು ಹುಬ್ಬಳ್ಳಿಯಿಂದಲೇ ಹೋರಾಟಕ್ಕೆ ಮೊದಲ ಧ್ವನಿ ಎತ್ತಲಾಗಿತ್ತು. ಆದರೆ ಈ ಭಾಗದಲ್ಲಿ ಯಾವುದೇ ರೀತಿಯ ಸಾರಿಗೆ ಸಂಸ್ಥೆಯವರಿಗೆ ಬೆಂಬಲ ಸಿಗದೇ ಹಿನ್ನೆಲೆಯಲ್ಲಿ ಕೇಲವರು ಮನವಿಗೆ ಮಾತ್ರ ಸೀಮಿತವಾಯಿತು. ಸಾರಿಗೆ ನೌಕರರನ್ನ ಸರ್ಕಾರಿ ನೌಕರರರೆಂದು ಪರಿಗಣಿಸಬೇಕೆಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಗೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಹಿನ್ನಡೆಯಾದಂಯಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಡಿಯಲ್ಲಿ ಬರುವ 8 ಸಾವಿರಕ್ಕೂ ಹೆಚ್ಚು ಬಸ್‌ಗಳ ಎಂದಿನಂತೆ ಸಂಚಾರ ನಡೆಸಿದ್ದು ಇದರಲ್ಲಿ ಯಾವುದೇ ಬಸ್ ಸ್ಥಗಿತಗೊಂಡಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos