ಉತ್ತಮ ಆರೋಗ್ಯಕ್ಕೆ ಹೆಸರುಬೇಳೆ

ಉತ್ತಮ ಆರೋಗ್ಯಕ್ಕೆ ಹೆಸರುಬೇಳೆ

ಬೆಂಗಳೂರು, . 9, ನ್ಯೂಸ್ ಎಕ್ಸ್ ಪ್ರೆಸ್: ಭಾರತೀಯರ ಅಡುಗೆಮನೆಯಲ್ಲಿ ಹೆಚ್ಚಿನದಾಗಿ ಬಳಕೆಯಾಗುವ ಪದಾರ್ಥಗಳಲ್ಲಿ ಹೆಸರುಬೇಳೆಯೂ ಒಂದು. ಇದು ಸಾಂಬಾರು ಮಾಡಲು ಮುಖ್ಯ ಪದಾರ್ಥವಾಗಿ ಉಪಯೋಗಿಸಲ್ಪಡುತ್ತದೆ. ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಹೆಚ್ಚಿನ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವಂತಹ ಪದಾರ್ಥ ಇದು.

ಹೃದಯದ ಆರೋಗ್ಯಕ್ಕೆ ಹೆಸರುಬೇಳೆ ಸೇವನೆಯು ಅತ್ಯಂತ ಉತ್ತಮ. ಇದರಲ್ಲಿನ ಫಿನಾಲಿಕ್ ಸಂಯುಕ್ತಗಳು ತನ್ನದೇ ಆದ ಅತ್ಯಂತ ಪರಿಣಾಮಕಾರಿ ಆಂಟಿ ಆಕ್ಸಿಡೆಂಟ್ ಗುಣಗಳಿಗೆ ಕಾರಣವಾದಂತವುಗಳು. ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡಿ ಹೃದಯದ ಆರೋಗ್ಯಕ್ಕೆ ಸಹಕರಿಸುತ್ತದೆ.

ಹೆಸರುಬೇಳೆಯು ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಹೊಂದಿರುತ್ತದೆ. ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಬಲ್ಲುದು. ಕರುಳಿನ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಹಾರಪದಾರ್ಥ ಹೆಸರುಬೇಳೆ. ಇದು ಕರುಳಿನ ಪದರಗಳ ಆರೋಗ್ಯ ರಕ್ಷಣೆಗೆ ಸಹಕರಿಸುವ ಮೇದಾಮ್ಲದ ಉತ್ಪತ್ತಿಗೆ ಸಹಕರಿಸುತ್ತದೆ.

ಹೆಸರುಬೇಳೆಯ ಆಂಟಿ ಇನ್ಫ್ಲಮೇಟರಿ ಗುಣಗಳು ಎದೆ ಉರಿ, ಉಬ್ಬರ, ವಾಯು ಸಮಸ್ಯೆಗಳನ್ನು ನಿರ್ವಹಣೆ ಮಾಡಲು ಸಹಕರಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ಮಾಡಲು ಸಹಾಯಕಾರಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos