ಬೀಟ್ರೂಟ್ ಸೇವಿಸಿದರೆ ಏನೆಲ್ಲಾ ಅಡ್ಡಪರಿಣಾಮ ಗೊತ್ತೆ..?

ಬೀಟ್ರೂಟ್ ಸೇವಿಸಿದರೆ ಏನೆಲ್ಲಾ ಅಡ್ಡಪರಿಣಾಮ ಗೊತ್ತೆ..?

ಬೆಂಗಳೂರು, . 9, ನ್ಯೂಸ್ ಎಕ್ಸ್ ಪ್ರೆಸ್: ತರಕಾರಿಗಳು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ, ದೇಹಕ್ಕೆ ಒಳ್ಳೆಯದು ಹೀಗೆ ನಾನಾ ಉಪಯೋಗವಿದೆ ಎಂಬುದನ್ನ ಕೇಳಿದ್ದೇವೆ. ಆದರೆ ನಿಮಗೆ ಗೊತ್ತಿಲ್ಲದೆ, ನೀವು ಸೇವಿಸುವ ಕೆಲ ತರಕಾರಿಗಳಲ್ಲಿ ವಿಷಕಾರಿ ಅಂಶ ವಿರುತ್ತದೆ. ಅದರಲ್ಲಿ ಬೀಟ್ರೂಟ್ ಕೂಡ ಒಂದು. ಬೀಟ್ರೂಟ್  ಹಿಂದಿನ ಕಾಲದಲ್ಲಿ ಔಷಧಿಯಾಗಿ ಉಪಯೋಗಿಸುತ್ತಿದ್ದರು. ಇದರಲ್ಲಿ ಅನೇಕ ಔಷಧಿಯ ಗುಣವಿದ್ದರು, ಕೆಲ ಅಡ್ಡಪರಿಣಾಮಗಳು ಇದೆ.

ಬೀಟುರಿಯಾಕ್ಕೆ ಕಾರಣವಾಗುತ್ತದೆ ಅತಿಯಾಗಿ ಬೀಟ್ರೂಟ್ ಸೇವನೆ ಮಾಡಿದರೆ ಮೂತ್ರವು ಕೆಂಪು ಬಣ್ಣದಿಂದ ಹೋಗುತ್ತವೆ. ಅದರಲ್ಲು ಕಬ್ಬಿಣದ ಕೊರತೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚು ಗೋಚರಿಸುತ್ತದೆ.

ಮೂತ್ರಪಿಂಡದಲ್ಲಿ ಕಲ್ಲು ಹಾರ್ವರ್ಡ್ ಹೆಲ್ತ್ ಬ್ಲಾಗ್ ಪ್ರಕಾರ, ಬೀಟ್ರೂಟ್ನಲ್ಲಿ ಆಕ್ಸಲೇಟ್ ಪ್ರಮಾಣ ಅಧಿಕವಾಗಿದೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲು ಕಾರಣವಾಗುತ್ತದೆ. ಹಾಗಾಗಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಂದ ಬಳಲುತ್ತಿರುವವರು ಬೀಟ್ರೂಟ್ನಿಂದ ದೂರವಿರಿ.

ಹೊಟ್ಟೆ ಕೆಡುವ ಸಾಧ್ಯತೆ ಅತಿಯಾದ ಬೀಟ್ರೂಟ್ ಸೇವನೆ ಹೊಟ್ಟೆ ಉಬ್ಬರಿಸುವಿಕೆ, ಸ್ನಾಯುಗಳ ಸೆಳೆತ ಅಲ್ಲದೆ ಮಲಬದ್ಧತೆಗೂ ಕಾರಣವಾಗಬಹುದು. ವಾಯುಸಂಬಂಧಿ ತೊಂದರೆ ಇರುವವರು ಬೀಟ್ರೂಟ್ ಸೇವನೆಯಿಂದ ಆದಷ್ಟು ದೂರವಿರಿ.

ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕ ಪ್ರಮುಖವಾಗಿ ಮಧುಮೇಯಿಗಳು ಬೀಟ್ರೂಟ್ ಸೇವನೆಯಿಂದ ದೂರವಿದ್ದಷ್ಟು ಒಳ್ಳೆಯದು. ಬೀಟ್ರೂಟ್ನ್ನು ಲೆಕ್ಕಕ್ಕಿಂತ ಅಧಿಕ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಅಧಿಕವಾಗುತ್ತದೆ.

ಗರ್ಭಾವಸ್ಥೆಯಲ್ಲಿ ತೊಂದರೆ ಗರ್ಭಿಣಿಯರು ಬೀಟ್ರೂಟ್ ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಇದರಲ್ಲಿರುವ ನೈಟ್ರೈಟ್ ಅಂಶ ಗರ್ಭಿಣಿ ಮಹಿಳೆಯರ ಮಗುವಿನ ಮೇಲೆ ಪರಿಣಾಮ ಬೀಳಬಹುದು.

 ಸಂಧಿವಾತಕ್ಕೆ ಕಾರಣ ಬೀಟ್ರೂಟ್ ನಲ್ಲಿರುವ ಕೆಲ ಅಂಶ ಸಂಧಿವಾತವನ್ನು ಉತ್ತೇಜಿಸುತ್ತದೆ. ನಿಮಗೆ ಜ್ವರ, ತಲೆ ನೋವು ಮುಂತಾದ ಸಮಸ್ಯೆಗಳಿದ್ದು ಬೀಟ್ರೂಟ್ ಸೇವಿಸಿದರೆ ಇನ್ನಷ್ಟು ನೋವಿಗೆ ಕಾರಣವಾಗಬಹುದು.

ಫ್ರೆಶ್ ನ್ಯೂಸ್

Latest Posts

Featured Videos