ಬೇಸಿಗೆಯಲ್ಲಿ ಕಾಡುವ ಅನಾರೋಗ್ಯ ತಡೆಗೆ ಹಸಿರು ಸೊಪ್ಪು ಸೇವಿಸಿ

ಬೇಸಿಗೆಯಲ್ಲಿ ಕಾಡುವ ಅನಾರೋಗ್ಯ ತಡೆಗೆ ಹಸಿರು ಸೊಪ್ಪು ಸೇವಿಸಿ

ಬೆಂಗಳೂರು, . 5, ನ್ಯೂಸ್ ಎಕ್ಸ್ ಪ್ರೆಸ್: ಹಸಿರು ಸೊಪ್ಪುಗಳ ಸೇವನೆಯು ಬೇಸಿಗೆಯಲ್ಲಿ ಹೆಚ್ಚು ಸಹಕಾರಿಯಾಗಬಲ್ಲುದು. ಅದರಲ್ಲಿಯೂ ಮುಖ್ಯವಾಗಿ ಪಾಲಕ್ ಸೇವನೆ ಉತ್ತಮ. ಸಲಾಡ್ಗಳ ರೂಪದಲ್ಲಿ ಬೇರೆ ಬೇರೆ ಪದಾರ್ಥಗಳ ಜೊತೆಯಾದರೂ ತೆಗೆದುಕೊಳ್ಳಬಹುದು. ಸೂರ್ಯಾಘಾತದಿಂದ ರಕ್ಷಿಸಲು ಇವುಗಳು ಸಹಕಾರಿಯಾಗುತ್ತವೆ.

ಈ ಹಸಿರು ಸೊಪ್ಪುಗಳು ದೇಹಕ್ಕೆ ಹೆಚ್ಚಿನ ತಾಪಮಾನವನ್ನು ತಡೆಯುವ ಸಾಮರ್ಥ್ಯವನ್ನು ನೀಡಬಲ್ಲವು. ಜೊತೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ದೇಹದ ಸಮತೋಲನಕ್ಕೆ ಹಾದಿ ಮಾಡಿಕೊಡಬಲ್ಲವು.

ಇದಕ್ಕಿಂತ ಹೆಚ್ಚಿನದಾಗಿ ಹಸಿರು ಸೊಪ್ಪುಗಳು ಸೂರ್ಯನ ಕಿರಣಗಳಿಂದಾದ ಹಾನಿಯನ್ನು ಕಡಿಮೆ ಮಾಡಬಲ್ಲದು. ಅಲ್ಲದೆ ಹಸಿರು ಸೊಪ್ಪುಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ಆಂತರ್ಯದಿಂದ ಶುದ್ಧ ಮಾಡಲು ಸಹಾಯ ಮಾಡುವಂತಹ ಕಾರ್ಯಕ್ಕೆ ಅನುವಾಗಬಲ್ಲವು.

ಹಸಿರು ಸೊಪ್ಪುಗಳು ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ಗಳನ್ನು ಹೊಂದಿದ್ದು, ಜೊತೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಕ್ಯಾಲ್ಶಿಯಂ, ಪೊಟ್ಯಾಷಿಯಂ, ಕಬ್ಬಿಣ ಇವೇ ಮುಂತಾದ ಪೋಷಕಾಂಶಗಳನ್ನು ಕೂಡ ಒಳಗೊಂಡಿದೆ. ಇವುಗಳು ಕಣ್ಣಿನ ಆರೋಗ್ಯ ರಕ್ಷಣೆಗೆ, ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡಲು, ತೂಕ ನಿರ್ವಹಣೆಗೆ, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ.

 

ಫ್ರೆಶ್ ನ್ಯೂಸ್

Latest Posts

Featured Videos