ಸಿಎಂ, ಮಾಜಿ ಸಿಎಂ ಭರ್ಜರಿ ಗೆಲುವು

ಸಿಎಂ, ಮಾಜಿ ಸಿಎಂ ಭರ್ಜರಿ ಗೆಲುವು

ಮುಂಬೈ,ಚಂಡೀಗಢ, ಅ. 24 : ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ನಿರೀಕ್ಷೆಯಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಘಟಾನುಘಟಿಗಳು ವಿಜೇತರಾಗಿದ್ದಾರೆ. ಬಿಜೆಪಿ ಧುರೀಣ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ನಾಗ್ಪುರ ನೈರುತ್ಯ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಶಿಶ್ ದೇಶ್ಮುಖ್ ಅವರನ್ನು 7,000ಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಮತ್ತು ಕಂದಾಯ ಸಚಿವ ಚಂದ್ರಕಾಂತ ಪಾಟೀಲ್ (ಕೊತ್ರುಡ್ ವಿಧಾನಸಭಾ ಕ್ಷೇತ್ರ), ಸಚಿವ ರಾಧಾಕೃಷ್ಣ ವಿಖೇ ಪಾಟೀಲ್(ಶಿರಡಿ), ಕಾಂಗ್ರೆಸ್ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವಾಣ್ (ಬೋಕರ್) ಮತ್ತು ಪೃಥ್ವಿರಾಜ್ ಚವಾಣ್(ಕರಡ್ ಸೌತ್), ಎನ್ಸಿಪಿ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್(ಬಾರಾಮತಿ), ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಒರ್ಲಿ ಕ್ಷೇತ್ರದಿಂದ ಗೆದ್ದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos