ಗೋಧ್ರಾ ನರಮೇಧ; ಆರೋಪಿ ಯಾಕೂಬ್ಗೆ ಜೀವಾವಧಿ ಶಿಕ್ಷೆ..!

ಗೋಧ್ರಾ ನರಮೇಧ; ಆರೋಪಿ ಯಾಕೂಬ್ಗೆ ಜೀವಾವಧಿ ಶಿಕ್ಷೆ..!

ಅಹಮದಾಬಾದ್, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಗುಜರಾತಿನ ಗೋದ್ರಾದಲ್ಲಿ ಸಬರಮತಿ ಎಕ್ಸ್‍ಪ್ರೆಸ್‍ಗೆ ಬೆಂಕಿ ಹಚ್ಚಿದ ಆರೋಪದಡಿ ಯಾಕೂಬ್ ಪಟಾಲಿಯಾ ಎಂಬ ಆರೋಪಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಯಾಕೂಬ್ ಕಳೆದ ವರ್ಷ ಜನವರಿ ತಿಂಗಳಲ್ಲಿ ಗೋದ್ರಾದಲ್ಲಿ ಸೆರೆ ಸಿಕ್ಕಿದ್ದ. 2002ರ ಫೆ.27ರಂದು ರೈಲಿನ ಬೋಗಿ ಎಸ್6ನಲ್ಲಿ ಬೆಂಕಿ ಹಚ್ಚಿದ ಪರಿಣಾಮ ಸುಮಾರು 59 ಜನರು ಮೃತಪಟ್ಟಿದ್ದರು. ನಂತರದಲ್ಲಿ ಗುಜರಾತಿನಲ್ಲಿ ದಂಗೆಗಳು ಆರಂಭವಾದವು.

ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‍ಐಟಿ)ಕ್ಕೆ ವಹಿಸಲಾಗಿತ್ತು. ನ್ಯಾ.ಎಸ್.ಎಚ್.ವೋರಾ ಅವರು ಹತ್ಯೆ ಹಾಗೂ ಪಿತೂರಿ ಆರೋಪದಡಿ ಯಾಕೂಬ್‍ನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. ಇದಕ್ಕಿಂತ ಮುಂಚೆ ಆತನ ಸಹೋದರರಿಬ್ಬರನ್ನು ಇದೇ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದ್ದು, ಅದರಲ್ಲಿ ಓರ್ವ ಜೈಲಿನಲ್ಲಿಯೇ ಕೊನೆಯುಸಿರೆಳೆದಿದ್ದನು.

ವಿಶೇಷ ನ್ಯಾಯಾಲಯ 2011ರ ಮಾರ್ಚ್ ನಲ್ಲಿ ಒಟ್ಟು 31 ಜನರನ್ನು ಆರೋಪಿಗಳೆಂದು ದೂಷಿಸಿ ಅದರಲ್ಲಿ 11 ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಗೂ 20 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಅಕ್ಟೋರ್ಬ 2017ರಲ್ಲಿ ಗುಜರಾತ್ ಹೈ ಕೋರ್ಟ್ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos