ಸಾಮೂಹಿಕ ಸೀಮಂತಕ್ಕೆ ಗರ್ಭಿಣಿಯರಿಗೆ ಭರ್ಜರಿ ಗಿಫ್ಟ್!

ಸಾಮೂಹಿಕ ಸೀಮಂತಕ್ಕೆ ಗರ್ಭಿಣಿಯರಿಗೆ ಭರ್ಜರಿ ಗಿಫ್ಟ್!

ಬೆಂಗಳೂರು: ಮಹಿಳೆಯರು ಗರ್ಭಿಣಿಯಾದಾಗ ಅವರ ಜೀವನದಲ್ಲಿ ತುಂಬಾ ಬದಲಾಗುತ್ತದೆ. ಹಾಗೂ ಅವರಿಗೆ ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆ ಯಾಗುತ್ತದೆ. ಗರ್ಭಿಣಿ ಯಾದ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಇದರಿಂದ ಗರ್ಭಿಣಿಯಾದ ಮಹಿಳೆಯರನ್ನು ಅತ್ಯಂತ ಖುಷಿಯಾಗಿ ನೋಡಿಕೊಳ್ಳುವುದು  ಹಾಗೆ ಅವರನ್ನು ಆಯ್ಕೆ ಮಾಡುವುದರಿಂದ ಅವರಿಗೆ ತುಂಬಾ ಸಂತೋಷವಾಗುತ್ತದೆ .

ಗರ್ಭಿಣಿ ಮಹಿಳೆಯರಿಗೆ 9 ತಿಂಗಳಾದ ನಂತರ ಸೀಮಂತ ಮಾಡುವುದು ಸರ್ವೇಸಾಮಾನ್ಯ ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡನೊರ್ವ ಸಾಮೂಹಿಕ ಸೀಮಂತವನ್ನು ಮಾಡಿದ್ದಾರೆ. ಗರ್ಭಿಣಿ ಮಹಿಳೆಯರ ಮಡಿಲು ತುಂಬಿ ಸೀರೆ ಕುಪ್ಪಸ ಅರಿಸಿನ ಕುಂಕುಮ ಬಳೆ ಹಣ್ಣು ಸೇರಿದಂತೆ  ಭರ್ಜರಿ ಗಿಫ್ಟ್​ನ್ನು ಚಿಕ್ಕಬಳ್ಳಾಪುರದ ಕಾಂಗ್ರೆಸ್​ ಮುಖಂಡನೊರ್ವ ನೀಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ನಗರದ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಬಡ ಹಾಗೂ ಮದ್ಯಮ ವರ್ಗದ ಗರ್ಭಿಣಿಯರಿಗೆ ಉಚಿತ ಸೀಮಂತ ಮಾಡುವುದಾಗಿ ಕರೆ ನೀಡಿದ್ದರು. ಇದರಿಂದ ಸಾವಿರಾರು ಜನ ಗರ್ಭಿಣಿಯರು ಸಾಮೂಹಿಕ ಉಚಿತ ಸೀಮಂತದಲ್ಲಿ ಭಾಗಿಯಾಗಿ ಸಂತಸ ಹಂಚಿಕೊಂಡರು.

ಇನ್ನು ಗರ್ಭಿಣಿಯರಿಗೆ ಖ್ಯಾತ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರ ಹಾಗೂ ಆರೋಗ್ಯ ಜಾಗೃತಿ ಮೇಳ ಸಹ ಆಯೋಜನೆ ಮಾಡಲಾಗಿತ್ತು. ಗರ್ಭೀಣಿಯರು ಸಾಲುಗಟ್ಟಿ ವೈದ್ಯರುಗಳಿಂದ ಮಾಹಿತಿ ಪಡೆದು ಆತಂಕ ನಿವಾರಣೆ ಮಾಡಿಕೊಂಡರು. ಇನ್ನು ಸೀಮಂತದಲ್ಲಿ ಭರ್ಜರಿ ಹೋಳಿಗೆ ಊಟ ಏರ್ಪಡಿಸಿದ್ದು ವಿಶೇಷವಾಗಿತ್ತು.

ಅದೇಷ್ಟೊ ಜನ ಗರ್ಭಿಣಿಯರಿಗೆ ಸೀಮಂತ ಮಾಡಲು ತಂದೆ-ತಾಯಿ ಇರಲ್ಲ, ಇದ್ದರೂ ಕೂಡ ಕೆಲ ಕುಟುಂಬಗಳಲ್ಲಿ ಬಾಂದವ್ಯ ಇರಲ್ಲ. ಇನ್ನು ಕೆಲವು ಪ್ರೇಮ ವಿವಾಹವಾದವರು ಸೀಮಂತದಿಂದ ಮಿಸ್ ಮಾಡಿಕೊಂಡ ಉದಾಹರಣೆಗಳಿವೆ. ಇಂಥಹದರಲ್ಲಿ ಸಮಾಜ ಸೇವಕನೊರ್ವ ಸಾಮೂಹಿಕ ಸೀಮಂತ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos