ಗ್ರಾಮ ದತ್ತ ನುಸುಳಿದ ಮೊಸಳೆ

ಗ್ರಾಮ ದತ್ತ ನುಸುಳಿದ ಮೊಸಳೆ

ಬಾಗಲಕೋಟೆ, ಅ. 26 : ಜಿಲ್ಲೆಯ ಮಲಪ್ರಭಾ ನದಿ ತೀರದ ಹಿರೇಮಾಗಿ ಗ್ರಾಮದಲ್ಲಿ 6 ಅಡಿ ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ.ಉಕ್ಕಿ ಹರಿಯುತ್ತಿದ್ದ ಮಲಪ್ರಭಾ ನದಿ ನೀರು ಸ್ವಲ್ಪ ಮಟ್ಟಿಗೆ ತಗ್ಗಿದೆ. ಹಿನ್ನೆಲೆಯಲ್ಲಿ ನದಿಯಿಂದ ಹೊರಟ ದೈತ್ಯ ಮೊಸಳೆಯೊಂದು ಗ್ರಾಮದತ್ತ ನುಗ್ಗಲು ಮುಂದಾಗಿದೆ. ಮೊಸಳೆಯನ್ನು ಕಂಡ ಗ್ರಾಮದ ಜನತೆಯ ಒಮ್ಮೆ ಕಂಗಾಲಾಗಿದ್ದಾರೆ.
ನದಿಯಲ್ಲಿ ನೀರು ತಗ್ಗಿದ ಹಿನ್ನೆಲೆ ಮೊಸಳೆ ಗ್ರಾಮದತ್ತ ತೆರಳಿದೆ. ಮೊಸಳೆಯನ್ನು ಕಂಡೊಡನೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ನಂತರ ಸ್ಥಳೀಯರೆಲ್ಲ ಸೇರಿ ಕಾರ್ಯಾಚರಣೆ ಮಾಡಿ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos