1ರಿಂದ 8ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್

1ರಿಂದ 8ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್

ಬೆಂಗಳೂರು, ಜ. 23: ಇತ್ತೀಚಿಗೆ ರಾಜ್ಯ ಸರ್ಕಾರ ರಾಜ್ಯದ 1ರಿಂದ 8ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ 2 ಜೊತೆ ಸಮವಸ್ತ್ರ ನೀಡುವುದಾಗಿ ಘೋಷಣೆ ಮಾಡಿತ್ತು. ಇಂತಹ 2 ಜೊತೆ ಸಮವಸ್ತ್ರಕ್ಕಾಗಿ ಇದೀಗ ಅನುದಾನ ಬಿಡುಗಡೆ ಮಾಡಿದೆ. ಈ ಮೂಲಕ ಸದ್ಯದಲ್ಲೇ ಶಾಲಾ ಮಕ್ಕಳಿಗೆ 2 ಜೊತೆ ಸಮವಸ್ತ್ರ ಕೈ ಸೇರಲಿದೆ.

ಹೌದು, ಸಮವಸ್ತ್ರ ಖರೀದಿಗಾಗಿ ಅನುದಾವನ್ನು ಬಿಡುಗಡೆ ಮಾಡಿದೆ. ರೂ.250 ಪ್ರತಿ ವಿದ್ಯಾರ್ಥಿಗೆ ಅನುದಾನ ನೀಡಲಾಗುತ್ತಿದೆ.

ಪ್ರತಿ ವಿದ್ಯಾರ್ಥಿಗೆ 2 ಜೊತೆ ಸಮವಸ್ತ್ರಕ್ಕೆ ರೂ.250 ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಇದನ್ನು ಹೊಲಿಸಿ, ವಿತರಣೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಎಸ್ ಡಿ ಎಂ ಸಿ ಗೆ ವಹಿಸಿದೆ ಎಂಬುದಾಗಿ ಸಮಗ್ರ ಶಿಕ್ಷಣ ಕರ್ನಾಟಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos