ಬಿಸಿಲಿನಿಂದ ಬೆಂದ ಸಿಲಿಕಾನ್‌ ಸಿಟಿ ಮಂದಿಗೆ ಸಿಹಿ ಸುದ್ದಿ

ಬಿಸಿಲಿನಿಂದ ಬೆಂದ ಸಿಲಿಕಾನ್‌ ಸಿಟಿ ಮಂದಿಗೆ ಸಿಹಿ ಸುದ್ದಿ

ಬೆಂಗಳೂರು: ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಇದ್ದ ಒಣಹವೆ ಅಂತಿಮವಾಗಿ ಕೊನೆಗೊಳ್ಳಲಿದೆ ಎಂಬುದನ್ನು ಸೂಚಿಸಿದೆ. ಮಳೆಯಿಲ್ಲದೆ, ನೀರಿಲ್ಲದೆ ಬಿಸಿಲಿನ ಬೇಗೆಯಲ್ಲಿ ಪರದಾಡುತ್ತಿರುವ ಸಿಲಿಕಾನ್ ಸಿಟಿ ಜನ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇಂದು ಬೆಳಗ್ಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದೆ.

ಭಾರತೀಯ ಹವಾಮಾನ ಇಲಾಖೆಯ ತಾಜಾ ಹವಾಮಾನ ಮುನ್ಸೂಚನೆಯ ಪ್ರಕಾರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮುಂಬರುವ ದಿನಗಳಲ್ಲಿ ಮಳೆ ಬೀಳಲಿದೆ. ಇಂದಿನಿಂದ ಏಪ್ರಿಲ್ 23ರ ಮಂಗಳವಾರದವರೆಗೆ ಮಳೆಯಾಗಲಿದೆ ಎಂದು ಹಮಾವಾನ ಇಲಾಖೆ ಸೂಚಿಸಿದೆ.

ಈಗಾಗಲೇ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮಳೆಯಾಗಿರುವುದು ಬೆಂಗಳೂರಿಗರಿಗೆ ಸಮಾಧಾನ ತಂದಿದೆ. ಹೀಗಾಗಿಯೇ ಇಂದು, ನಾಳೆ ಮಳೆಯಾಗಲಿದೆ ಎಂಬ ನಿರೀಕ್ಷೆಯಲ್ಲಿರುವ ಮಂದಿಗೆ ಹವಾಮಾನ ಇಲಾಕೆಯ ಮುನ್ಸೂಚನೆ ಮತ್ತಷ್ಟು ನೆಮ್ಮದಿ ನೀಡಿದೆ.

ಏಪ್ರಿಲ್ 21 ರವರೆಗೆ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿಯ ವೇಗದೊಂದಿಗೆ ಗುಡುಗು ಸಹಿತ ಮಿಂಚಿನ ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಸೂಚನೆ ನೀಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos