ಮನೆಮಂದಿ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ !

ಮನೆಮಂದಿ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ !

ಕಲಬುರಗಿ, ಜು.13: ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಶಹಾಪುರ ರಸ್ತೆಯಲ್ಲಿನ ನಮಾಜಿ ಲೇಔಟ್ ನಲ್ಲಿ ಮುಸುಕುಧಾರಿ ಐವರು ದರೋಡೆಕೋರರು ನುಗ್ಗಿ ಹಲ್ಲೆ ನಡೆಸಿ 80 ಗ್ರಾಮ್ ಚಿನ್ನಾಭರಣ ಹಾಗೂ 10 ಸಾವಿರ ನಗದು ಮತ್ತು ಇತರೆ ವಸ್ತುಗಳನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.
ರಾಜೇಂದ್ರಪ್ಪ ಶಿರಶ್ಯಾಡ ಹಾಗೂ ಅವರ ಪತ್ನಿ, ಮಕ್ಕಳಿಬ್ಬರ ಮೇಲೆ ದರೋಡೆಕೋರರು ಮನ ಬಂದಂತೆ ಥಳಿಸಿ ಅವರನ್ನು ಕಟ್ಟಿ ಹಾಕಿ ಮನೆ ಮಂದಿ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಈ ಕುರಿತು ಜೇವರ್ಗಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos