“ನಿನ್ನ ಸ್ಮೇಹಿತೆಗೆ ನನ್ನನ್ನು ಪ್ರೀತಿಸಲು ಹೇಳು” ಎಂದು ಚಾಕು ತೋರಿದ ಬಾಲಕ!

“ನಿನ್ನ ಸ್ಮೇಹಿತೆಗೆ ನನ್ನನ್ನು ಪ್ರೀತಿಸಲು ಹೇಳು” ಎಂದು ಚಾಕು ತೋರಿದ ಬಾಲಕ!

ಬೆಂಗಳೂರು, ಮಾ, 21, ನ್ಯೂಸ್ ಎಕ್ಸ್ ಪ್ರೆಸ್: ಖಾಸಗಿ ಬಸ್ನಲ್ಲಿ ಕೆಲಸ ಮಾಡುವ 15 ವರ್ಷದ ಹುಡುಗನೊಬ್ಬ 10ನೇ ತರಗತಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ, ನಿನ್ನ ಸ್ನೇಹಿತೆಯನ್ನು ನಾನು ಪ್ರೀತಿಸುತ್ತಿದ್ದೇನೆ. ಅವಳಿಗೆ ಒಪ್ಪಿಕೊಳ್ಳಲು ಹೇಳು ಅಂತಾ ಚಾಕು ತೋರಿಸಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯನ್ನು ಪ್ರತಿದಿನ ಪೋಷಕರೇ ಶಾಲೆಗೆ ಬಿಡುತ್ತಿದ್ದರು. ಆದ್ರೆ ಜನವರಿ 26 ರಂದು ಗಣರಾಜ್ಯೋತ್ಸವದ ದಿನ ಶಾಲೆ ಅರ್ಧಕ್ಕೆ ಮುಗಿದಿದ್ದರಿಂದ , ಬಾಲಕಿ ಒಬ್ಬಳೇ ಮನೆಗೆ ನಡೆದುಕೊಂಡು ಹೋಗುತ್ತಿದ್ಲು. ಮಧ್ಯಾಹ್ನ 12.30 ರ ಸುಮಾರಿಗೆ ಬೆಂಗಳೂರು ಹೊರಮಾವು ಅಗರ ಮುಖ್ಯರಸ್ತೆಯಲ್ಲಿ ಬೈಕ್‍ನಲ್ಲಿ ಬಂದ ಒಬ್ಬ, ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ, 9ನೇ ತರಗತಿಯಲ್ಲಿ ಓದುತ್ತಿರುವ ನಿನ್ನ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದೇನೆ. ನನ್ನನ್ನು ಮದುವೆಯಾಗಲು ಆಕೆಯನ್ನು ಒಪ್ಪಿಸು. ಇಲ್ಲಾ ಅಂದ್ರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಅಂತಾ ಬೆದರಿಕೆ ಹಾಕಿದ್ದ. ಮನೆಗೆ ಬಂದ ಬಾಲಕಿ ನಡೆದ ಘಟನೆಯನ್ನು ಪೋಷಕರಿಗೆ ತಿಳಿಸಿದ್ದಳು. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos