ಮೊದಲ ಅರ್ಧಶತಕ ಸಿಡಿಸಿದ ಗಿಲ್

ಮೊದಲ ಅರ್ಧಶತಕ ಸಿಡಿಸಿದ ಗಿಲ್

ಬೆಂಗಳೂರು: 17 ನೇ ಆವೃತ್ತಿ ಐಪಿಎಲ್ ನಲ್ಲಿ ನಿನ್ನೆ ನಡೆದ 17ನೇ ಪದ್ಯದಲ್ಲಿ  ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ ತಂಡಗಳು ಮುಖಾಮುಖಿಯಾಗಿತ್ತು.ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಭ್​ಮನ್ ಗಿಲ್ ಈ ಸೀಸನ್​ನ ಮೊದಲ ಅರ್ಧಶತಕ ಸಿಡಿಸಿದ್ದಾರೆ.

ಗಿಲ್​ಗೆ ಈ ಅರ್ಧಶತಕ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಇದು ನಾಯಕನಾಗಿ ಶುಭ್‌ಮನ್‌ ಅವರ ಮೊದಲ ಅರ್ಧಶತಕವಾಗದ್ದರೆ, ಈ ಸೀಸನ್​ನಲ್ಲಿ ಅರ್ಧಶತಕ ಬಾರಿಸಿದ ಗುಜರಾತ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಶುಭ್‌ಮನ್ ಪಾತ್ರರಾಗಿದ್ದಾರೆ.

ಆರಂಭಿಕನಾಗಿ ಕಣಕ್ಕಿಳಿದಿದ್ದ ಗಿಲ್ ತಮ್ಮ ಇನ್ನಿಂಗ್ಸ್​ನಲ್ಲಿ 48 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 89 ರನ್ ಕಲೆಹಾಕಿದರು. ಅವರ ಇನ್ನಿಂಗ್ಸ್​ನ ವಿಶೇಷತೆಯೆಂದರೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಗಿಲ್, ಕೊನೆಯವರೆಗೂ ಔಟಾಗದೆ ಉಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos