ಅಗತ್ಯ ಕಾನೂನುಗಳ ನೆರವು ಪಡೆದುಕೊಳ್ಳಿ

ಅಗತ್ಯ ಕಾನೂನುಗಳ ನೆರವು ಪಡೆದುಕೊಳ್ಳಿ

ಹುಬ್ಬಳ್ಳಿ, ಜ. 22: ಕಾನೂನುಗಳು ನಮ್ಮ ಒಳಿತಿಗಾಗಿ ಇರುವಂತವು. ಇವು ಪ್ರತಿಯೊಬ್ಬರಿಗೂ ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸುತ್ತವೆ. ಇಂತಹ ಕಾನೂನುಗಳ ಅರಿವು ಪಡೆದು ಅವಗಳಿಂದ ಅಗತ್ಯ ನೆರವು ಪಡೆದುಕೊಳ್ಳಿ ಎಂದು ಹುಬ್ಬಳ್ಳಿಯ 5 ನೇಯ ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್ ಸಿ ನ್ಯಾಯಧೀಶೆ ಅನುರಾಧ ಹೆಚ್.ಟಿ .ಹೇಳಿದರು.

ಇಂದು‌ ಹುಬ್ಬಳ್ಳಿಯ ಗೋಕುಲದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಪಂಚಾಯತಿ, ವಕೀಲರ ಸಂಘ, ವಾರ್ತಾ, ಅಭಿಯೋಜನೆ, ಶಿಕ್ಷಣ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಹಾಗೂ ಆರಕ್ಷಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಾಲಯ ಕುರಿತಾದ ಜನ ಜಾಗ್ರತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಸಾಮಾನ್ಯ ಕಾನೂನುಗಳ ಅರಿವು ಇರಬೇಕು. ಇವುಗಳನ್ನು ಪಾಲಿಸುವುದರ ಜೊತೆಗೆ ಶೋಷಣೆಯ ವಿರುದ್ಧ ಅವುಗಳ ಸಹಾಯ ಪಡೆಯಬೇಕು. ಇದರಿಂದ ಉತ್ತಮ ರೀತಿಯಲ್ಲಿ ಜೀವನ ಕಟ್ಟಿಕೊಳ್ಳಬಹುದು. ತಾಲೂಕು ಕಾ‌ನೂನು‌ ಸೇವಾ ಸಮಿತಿ ವತಿಯಿಂದ ಮಹಿಳೆಯರು, ಅಶಕ್ತರು, ಸಾಮಾಜಿಕವಾಗಿ ಹಿಂದುಳಿದವರಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಬ್ಬಳ್ಳಿ ಶಹರ ತಹಶಿಲ್ದಾರ ಶಶಿಧರ ಮಾಡ್ಯಾಳ, ಇಂದಿಗೂ ದೇಶದಲ್ಲಿ ಬಹುಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪಡೆದವರಿಗೂ ಸಹ ಕಾನೂನಿನ ಅರಿವು ಸಂಪೂರ್ಣ ಇರುವುದಿಲ್ಲ.

ಈ‌ ನಿಟ್ಟಿನಲ್ಲಿ ಎಲ್ಲರೂ ಕಾನೂನು ಅರಿವು ಪಡೆದುಕೊಳ್ಳಬೇಕು. ಇಂದಿನ ತಂತ್ರಜ್ಞಾನವನ್ನು ಯುವಜನೆತೆ ಸೇರಿದಂತೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಸ್ಮಾರ್ಟ್ ಪೋನ್ ಗಳಲ್ಲಿ ಬೆರಳ ತುದಿಯಲ್ಲಿ ಕಾನೂನುಗಳ ಬಗ್ಗೆ ಮಾಹಿತಿ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ವಕೀಲರಾದ ವಾಯ್. ಯು.ಮುದಿಗೌಡ್ರ, ಇಂದಿಗೂ ದೇಶದಲ್ಲಿ ಬಾಲ್ಯ ವಿವಾಹ ಪದ್ದತಿ ಜಾರಿಯಲ್ಲಿದೆ. ಬಾಲಕಿಯರ ಆರೋಗ್ಯದ ಸಿತ್ಥಿಗತಿಯನ್ನು ಅರಿತು ಬಾಲ್ಯ ವಿವಾಹವನ್ನು ತಡೆಯಲು ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ತಿಳಿ‌ ಹೇಳಿದರು. ಇನ್ನೋರ್ವ ಉಪನ್ಯಾಸಕ ಎಂ.ಎಸ್.ಹೀರೆಮಠ ಮಾತನಾಡಿ, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಜನದಟ್ಟಣೆ ಅಪಘಾತಗಳನ್ನು ತಡೆಯುವಲ್ಲಿ ಸಂಚಾರಿ ನಿಯಮಗಳು ಪಾಲನೆ ಅಗತ್ಯ ಎಂದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ್ ನಾಸಿ, ನಿವೃತ್ತ ಪ್ರಾಚಾರ್ಯ ಎಸ್.ಎಮ್.ಸ್ಪಾಪನಾಳ್, ಸರಕಾರಿ ಅಭಿಯೋಜಕ ವಿನಯ ಎಸ್ ಪಾಟೀಲ, ವಾರ್ತೆ ಇಲಾಖೆಯ ಅಧೀಕ್ಷಕ ವಿನೋದಕುಮಾರ ಭಗವತಿ,ರೈತ ಸಂಘದ ಅಧ್ಯಕ್ಷ ಬಸಪ್ಪ ಎಲಿಗಾರ್, ವಕೀಲ ಎಮ್.ಎಸ್.ಹೀರೆಮಠ, ಗ್ರಾಮದ ಹಿರಿಯರಾದ ರಾಮಣ್ಣ ಉಣಕಲ್, ಮಹಾದೇವಪ್ಪ ಪೊಜಾರ, ಶಂಕರ ಪಾಟೀಲ್, ಮಡಿವಾಲಪ್ಪ ನಾಯ್ಕರ್, ಉಪಸಿತ್ಥಿರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos