ಗರ್ಭದೊಂದಿಗೆ ಈಜುಕೊಳದಲ್ಲಿ ಸಮೀರಾ

ಗರ್ಭದೊಂದಿಗೆ ಈಜುಕೊಳದಲ್ಲಿ ಸಮೀರಾ

ನವದೆಹಲಿ, ಜು. 05 : 2ನೇ ಬಾರೀ ಗರ್ಭ ಧರಿಸಿದ ಸಮೀರಾ ರೆಡ್ಡಿ ಈಜುಕೊಳದ ನೀರಿನ ಒಳಗೆ ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸುದೀಪ್ ಅಭಿನಯ ವರದನಾಯಕ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ಸಮೀರಾ ರೆಡ್ಡಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಂಚಿದ್ದಾರೆ.
“ನನ್ನ 9 ನೇ ತಿಂಗಳ ಗರ್ಭದ ಉಬ್ಬಿನ ಸೌಂದರ್ಯವನ್ನು ಫೋಟೊ ಶೂಟ್ ಮಾಡಿಸಿ ಸಂಭ್ರಮಿಸಬೇಕೆಂದು ನಿರ್ಧರಿಸಿದೆ. ಆ ಸಮಯದಲ್ಲಿ ನಾವು ಹೆಚ್ಚು ದುರ್ಬಲ, ಭಯಭೀತ, ನಿತ್ರಾಣಗೊಂಡಿರುತ್ತೇವೆ. ಅಲ್ಲದೆ, ಅಷ್ಟೇ ಸುಂದರ ಕ್ಷಣ ಕೂಡ ಅದು. ‘’ನನ್ನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅಂದಹಾಗೆ, ನಾವೆಲ್ಲರೂ ನಮ್ಮ ಜೀವನದ ವಿವಿಧ ಹಂತಗಳನ್ನು ದಾಟಿದ್ದೇವೆ. ನಮಗೆ ಪ್ರೀತಿಯ ಅಗತ್ಯವಿದೆ. ನಮ್ಮ ಪ್ರತಿ ಹಂತವನ್ನೂ ಸ್ವೀಕರಿಸಬೇಕು”. ತಮ್ಮ ಫೋಟೋಗಳನ್ನು ಯಾವುದೇ ರೀತಿಯಲ್ಲಿ ಫೋಟೋಶಾಪ್ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಕನ್ನಡ ಸೇರಿ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ನಟಿಸಿದ ಸಮೀರಾ ರೆಡ್ಡಿ.

ಫ್ರೆಶ್ ನ್ಯೂಸ್

Latest Posts

Featured Videos