ಏಳು ದಿನಗಳ‌ ಕಾಲ ಗಣಪತಿ ಉತ್ಸವ

ಏಳು ದಿನಗಳ‌ ಕಾಲ ಗಣಪತಿ ಉತ್ಸವ

ಮಹದೇವಪು , ಸೆ. 2: ಇಂದು ನಾಡಿನಾದ್ಯಂತ ಗಣೇಶ ಹಬ್ಬವನ್ನ ಬಹಳ ವಿಜೃಂಭಣಿಯಿಂದ ಆಚರಿಸಲಾಗುತಿದ್ದು, ಮಹದೇವಪುರದ ಶಾಂತಿ ನಿಕೇತನದಲ್ಲಿ ವಿಜೃಂಭಣಿಯ ಗಣಷೋತ್ಸವ ವನ್ನಆಚರಿಸಲಾಗುತಿದೆ. ಹೌದು, ಇಂದು ಎಲ್ಲಿ ನೋಡಿದರಲ್ಲಿ ಗಣಪತಿ ಬಪ್ಪ ಮೊರಯಾ ಎನ್ನುವ ಪದ ಕೇಳಿಬರುತಿದೆ.  ದೇಶದ ವಿವಿಧ ಭಾಗಗಳಿಂದ ಬಂದು ನೆಲೆಸಿರುವ ನಿವಾಸಿಗಳಿಂದ ಅದ್ಬುತ ಕಲಾ ಪ್ರದರ್ಶನ ಮಾಡಲಾಗುತ್ತಿದೆ.

ಸೂರ್ಯ ರಥದಲ್ಲಿ ಆಗಮಿಸಿದ ವಿಘ್ನ ವಿನಾಯಕನಿಗೆ ಕಲಾ ತಂಡಗಳಿಂದ ಅದ್ದೂರಿ ಸ್ವಾಗತ. ಇಲ್ಲಿನ ಎಲ್ಲಾ ನಿವಾಸಿಗಳು ತಮ್ಮ ರಾಜ್ಯದ ಕಲಾ ಪ್ರದರ್ಶನ ನೀಡಿದರು. ಕರ್ನಾಟಕ, ಮಹಾರಾಷ್ಟ್ರ ಪಶ್ಚಿಮ ಬಂಗಾಳ, ಅಸ್ಸಾಂ, ಒರಿಸ್ಸಾ , ತಮಿಳುನಾಡು ಮತ್ತು ಕೇರಳ ರಾಜ್ಯಗಳ ಉಡುಗೆ ತೊಟ್ಟು ಭರ್ಜರಿ ಪ್ರದರ್ಶನ ನೀಡಿದರು.

ಸೂರ್ಯ ರಥದಲ್ಲಿ ಆಗಮಿಸಿದ ಗಣಪನಿಗೆ, ಮಹಿಳಾ ಬೈಕ್ ಸವಾರರು, ಮಹಿಳಾ ಅಶ್ವಾರೋಹಿ ಮತ್ತು ಪುರುಷ ಭದ್ರತಾ ಪಡೆಗಳಿಂದ ಸ್ವಾಗರ ಕೋರಲಾಯಿತು. ದೇಶದ ಎಲ್ಲಾ ರಾಜ್ಯಗಳ ಕಲೆಗಳ ಪ್ರದರ್ಶನ ನೀಡಿದರು.

ಏಳು ದಿನಗಳ‌ ಕಾಲ ಶಾಂತಿನಿಕೇತನದಲ್ಲಿ ಗಣಪತಿ ಉತ್ಸವ ನಡೆಯಲಿದೆ. ರಾಜ್ಯದ ಡೋಳ್ಳು ಕುಣಿತ, ಪೂಜಾ ಕುಣಿತ, ಪಟ್ಟದ ಕುಣಿತ, ದ್ವಜ ಕುಣಿತಗಳು ಮತ್ತು ಮಹಾರಾಷ್ಟ್ರದ ಕಲೆಗಳ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos