ಗೇಲ್ ಜತೆ ಕೊಹ್ಲಿ ಡ್ಯಾನ್ಸ್

ಗೇಲ್ ಜತೆ ಕೊಹ್ಲಿ ಡ್ಯಾನ್ಸ್

ಗಯಾನ, ಆ.10 : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಒಬ್ಬ ಒಳ್ಳೆಯ ಡ್ಯಾನ್ಸರ್ ಸಾಬೀತು ಮಾಡಿದ್ದಾರೆ. ಭರ್ಜರಿ ಸ್ಟೆಪ್ ಹಾಕುವ ಕೊಹ್ಲಿ, ಕೆರಿಬಿಯನ್ ದಿಗ್ಗಜ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಜತೆ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ವೆಸ್ಟ್ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯ ಮಳೆಯಿಂದ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದ ಕಾರಣ, ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಲು ಕೆಲ ಹಾಡುಗಳನ್ನು ಹಾಕಲಾಗುತಿತ್ತು. ಕೊಹ್ಲಿ ಕೆಲ ಭಾರತೀಯ ಆಟಗಾರರ ಜತೆ ಡ್ಯಾನ್ಸ್ ಮಾಡುತ್ತಾ ಪ್ರೇಕ್ಷಕರನ್ನು ರಂಜಿಸಿದರು. ಪಿಚ್ ಸಿದ್ಧಪಡಿಸುತ್ತಿದ್ದ ಮೈದಾನ ಸಿಬ್ಬಂದಿ ಜತೆಗೂ ಕೊಹ್ಲಿ ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ಫ್ರೆಶ್ ನ್ಯೂಸ್

Latest Posts

Featured Videos