ಬೆಂಗಳೂರಿನಲ್ಲಿ ತುಂತುರು ಮಳೆಯಿಂದ ಜನರು ಫುಲ್‌ ಖುಷ್

ಬೆಂಗಳೂರಿನಲ್ಲಿ ತುಂತುರು ಮಳೆಯಿಂದ ಜನರು ಫುಲ್‌ ಖುಷ್

ಬೆಂಗಳೂರು: ಮುಂಜಾನೆಯಿಂದಲೂ ಕೆಲವೆಡೆ ಮೋಡ ಕವಿದ ವಾತಾವರಣ ಹಿನ್ನಲೆ ನಗರದ ಕೆಲವೆಡೆ ಲಘು ಮಳೆಯಾಗಿದೆ. ಎರಡು ದಿನ ಕಾಲ ಬೆಂಗಳೂರಿನಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ‌ ಮೂನ್ಸುಚನೆ ನೀಡಿತ್ತು.

ಬೆಂಗಳೂರಿಗೆ ವರುಣನ ಆಗಮನವಾಗಿದ್ದು, ಸಿಟಿಯಲ್ಲಿ ತುಂತುರು ಮಳೆ ಆರಂಭವಾಗಿದೆ. ನಗರದ ಟೌನ್ ಹಾಲ್, ಮಾರ್ಕೆಟ್, ಕೆಆರ್ ಸರ್ಕಲ್, ವಿಧಾನಸೌಧ, ಜೆ.ಪಿ.ನಗರ, ಕಾರ್ಪೊರೇಷನ್ ಸರ್ಕಲ್, ಮೈಸೂರ್ ಬ್ಯಾಂಕ್ ಸರ್ಕಲ್, ಸೇರಿದಂತೆ ಹಲವೆಡೆ ತುಂತುರು ಮಳೆ ಶುರುವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಮಂದಿ ಫುಲ್​ ಖುಷ್​ ಆಗಿದ್ದಾರೆ.

ಹವಾಮಾನ ಇಲಾಖೆಯಿಂದ ಯಾವುದೇ ಅಲರ್ಟ್ ಘೋಷಣೆ ಇಲ್ಲ. ಇನ್ನು ನಗರದ ಉಷ್ಣತಾಮಾನದಲ್ಲಿ ಇಳಿಕೆ ಕಂಡಿದೆ. ಸುಮಾರು 2 ತಿಂಗಳ ಬಳಿಕ ನಗರದಲ್ಲಿ ತಾಪಮಾನದಲ್ಲಿ ಇಳಿಕೆಯಾಗಿದ್ದು, ಸಧ್ಯ ಬೆಂಗಳೂರಿನಲ್ಲಿ ವಾತಾವರಣ ತಂಪಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos