ಇಂದಿನಿಂದ ಏ. 14ರವರೆಗೂ ಉಚಿತ ಹಾಲು

ಇಂದಿನಿಂದ ಏ. 14ರವರೆಗೂ ಉಚಿತ ಹಾಲು

ಬೆಂಗಳೂರು, ಏ. 02: ರಾಜ್ಯದಲ್ಲಿ ಇಂದಿನಿಂದ ಏಪ್ರಿಲ್ 14ರವರೆಗೂ ಬಡವರಿಗೆ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತದೆ. ಕರೋನಾ ಭೀತಿಯಿಂದಾಗಿ ದೇಶದಾದ್ಯಂತ ಏಪ್ರಿಲ್‌ 14ರವರೆಗೆ ಲಾಕ್​ಡೌನ್‌ ಘೋಷಿಸಲಾಗಿದ್ದು, ಇದರನ್ವಯ ರಾಜ್ಯದಲ್ಲೂ ಸಂಪೂರ್ಣ ಬಂದ್‌ ಆಗಿದೆ. ಇದರ ಪರಿಣಾಮ ಕರ್ನಾಟಕ ಹಾಲು ಒಕ್ಕೂಟದಲ್ಲಿ ಪ್ರತಿನಿತ್ಯ 7 ಲಕ್ಷ ಲೀಟರ್ ಹಾಲು ಉಳಿತಾಯವಾಗುತ್ತಿದೆ. ಇದು ವ್ಯರ್ಥವಾಗದಂತೆ, ಬಡವರಿಗೆ ಹಂಚಲು ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರಿನ ಅಶ್ವತ್ಥ ನಗರದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತರಿಸುವ ವ್ಯವಸ್ಥೆಗೆ ಚಾಲನೆ ನೀಡಿದರು.

ಈ ಸಂರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಜೊತೆಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos