ಸಾಮಾನ್ಯ ವಿಮಾರಂಗ ಕಂಪನಿ ವಿಲೀನಕ್ಕೆ ಫೋರಂ ಒತ್ತಾಯ

ಸಾಮಾನ್ಯ ವಿಮಾರಂಗ ಕಂಪನಿ ವಿಲೀನಕ್ಕೆ ಫೋರಂ ಒತ್ತಾಯ

ಬೆಂಗಳೂರು, ಡಿ. 30:  ಸಾರ್ವಜನಿಕ ರಂಗದ ವಿಮಾ ಸಂಸ್ಥೆಗಳಾದ ನ್ಯಾಷನಲ್ ಇನ್ಸೂರೆನ್ಸ್, ಓರಿಯಂಟಲ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗಳು ನಷ್ಠ ಎದುರಿಸುತ್ತಿವೆ . ಕೇಂದ್ರ ಸ್ವಾಮ್ಯದ ಸಮಾನ್ಯ ವಿಮಾ ರಂಗದ ಈ ಮೂರು ಕಂಪನಿಗಳನ್ನು ವಿಲೀನಗೊಳಿಸಿ ಕರ‍್ಪೊರೇಷನ್ ರೂಪದಲ್ಲಿ ಬಲಪಡಿಸುವುದರ ಜೊತೆಗೆ ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಸ್ಥಾಪಿಸಿಬೇಕು ಎಂದು ಪಬ್ಲಿಕ್ ಸೆಕ್ಟರ್ ಜನರಲ್ ಆಫಿರ‍್ಸ್ ಎಂಪ್ಲಾಯ್ಸ್ ಫೋರಮ್ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಪ್ರಧಾನ ಕಾರ್ಯದರ್ಶಿ ಎ. ಮುರುಳಿಧರ, ಈಗಾಗಲೇ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯು ದೆಹಲಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯು ಕೊಲ್ಕತ್ತಾದಲ್ಲಿ ಹಾಗೂ ಯುನೆಟೈಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯು ಚೆನೈನಿಂದ ಕರ‍್ಯನರ‍್ವಹಿಸುತ್ತದೆ. ಈಗಾಗಲೇ ಮುಂಬೈನಲ್ಲಿ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯು  ತನ್ನ ಮುಖ್ಯ ಕಚೇರಿಯಿಂದ ಕರ‍್ಯ ನರ‍್ವಹಿಸುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ನಗರ ವ್ಯಾಪಾರೀಕರಣಕ್ಕೆ ಉತ್ತಮ ಸ್ಥಳವಾಗಿದೆ. ಪ್ರಪಂಚದಲ್ಲಿ 4ನೇ ದೊಡ್ಡ ಟೆಕ್ ಹಬ್ ಆಗಿ ಬೆಂಗಳೂರು ರೂಪಗೊಂಡಿರುವುದು ಮತ್ತು 2020ರ ವೇಳೆಗೆ ಪ್ರಪಂಚದ ನ೦.1 ಟೆಕ್ ಹಬ್ ಆಗಿ ಬೆಂಗಳೂರು ವಿಕಾಸಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos