ಬೈಕ್ ಸವಾರರು ಹಾಗೂ ಪ್ರಯಾಣಿಕರಿಗೆ ದಂಡ

ಬೈಕ್ ಸವಾರರು ಹಾಗೂ ಪ್ರಯಾಣಿಕರಿಗೆ ದಂಡ

ಮಧುಗಿರಿ: ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಬೈಕ್ ಹಾಗೂ ವಾಹನ ಸವಾರರಿಗೆ ಪಿಎಸ್‌ಐ ಎಲ್.ಕಾಂತರಾಜು ದಂಡ ವಿಧಿಸಿದರು.
ಪಟ್ಟಣದ ಉಪವಿಭಾಗ ಕಛೇರಿ ಹಾಗೂ ಖಾಸಗಿ ಬಸ್ ನಿಲ್ದಾಣದ ಸಮೀಪ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ದ್ವಿಚಕ್ರವಾಹನ ಸವಾರರಿಗೆ ಹಾಗೂ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಕರಿಗೆ ಕರೋನ ವೈರಸ್ ಬಗ್ಗೆ ಮನವರಿಕೆ ಮಾಡಿಕೊಡುವ ಜೊತೆಗೆ ೫೦೦ ರೂಪಾಯಿ ದಂಡ ವಿಧಿಸಿದರು.
ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಮಾಸ್ಕ್ ಬಳಸದೆ ಇರುವುದನ್ನು ಕಂಡ ಸಿಂಗಂ ಅಂತಹವರಿಗೆ ಬೈಯ್ದು ಬುದ್ದಿ ಹೇಳುತ್ತಾ ಜನರು ತಮ್ಮ ಆರೋಗ್ಯದೃಷ್ಟಿಯಿಂದಲಾದರೂ ಮೂಗು, ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಿ ಓಡಾಡಬೇಕಿದೆ ಮಹಾಮಾರಿ ಕೊರೋನಾ ನಿಯಂತ್ರಿಸುವ ಜೊತೆಗೆ ಈ ವೈರಾಣುಗಳು ಹರಡದಂತೆ ತಡೆಗಟ್ಟಲು ಇರುವ ಮೊದಲ ಅಸ್ತ್ರವೆಂದರೆ ಮಾಸ್ಕ್ ನೀವುಗಳು ಹಿಗೆ ನಿಮ್ಮ ಆರೋಗ್ಯದ ಬಗ್ಗೆ ಬೇಜಾವಬ್ದಾರಿ ತೋರಿದರೆ ಇದು ಪ್ರತಿಯೊಬ್ಬರಿಗೂ ಕಂಟಕವಾಗಲಿದೆ ಇಡೀ ಸಮುದಾಯಕ್ಕೆ ತಲೆನೋವಾಗಿ ಕಾಡುತ್ತಿರುವ ಕೊರೋನಾ ವೈರಸ್‌ನ್ನು ನಮ್ಮ ದೇಹಕ್ಕೆ ಬಿಟ್ಟುಕೊಳ್ಳದೆ ನಮ್ಮ ದೇಶದಿಂದ ಆಚೆ ಓಡಿಸಬೇಕಾಗಿದ್ದು ದಯವಿಟ್ಟು ಮಾಸ್ಕ್ ಧರಿಸಿ ಓಡಾಡುವಂತೆ ಮನವರಿಕೆ ಮಾಡಿಕೊಂಡರು.
ಪೋಲಿಸರು ದಂಡ ಹಾಕುತ್ತಿದ್ದನ್ನು ಗಮನಿಸಿದ ಕೆಲ ವಾಹನ ಸವಾರರು ಗಡಿಬಿಡಿಯಲ್ಲಿ ತಮ್ಮ ಜೇಬಿನಲ್ಲಿದ್ದ ಕರವಸ್ರ‍್ತ , ಟವಲ್, ಮಾಸ್ಕ್ ಇತ್ಯಾದಿಗಳನ್ನು ತೆಗೆದು ಆತುರಾತುರವಾಗಿ ಹೇಗೆಗೊ ಹಾಕಿಕೊಂಡು ಬರುತ್ತಿದ್ದ ದೃಶ್ಯ ನೋಡುಗರಿಗೆ ನಗು ತರುಸಿತ್ತು. ಮತ್ತೊಂದೆಡೆ ಮುಂದಕ್ಕೆ ಚಲಿಸಿದ ನಂತರ ಇನ್ನೂ ಕೆಲವರು ಮಾಸ್ಕ್ಗಳು ತೆಗೆದು ಯಥಾಪ್ರಕಾರವಾಗಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸರ್ಕಾರ ಮಾಸ್ಕ್ ಧರಿಸುವುದು ಖಡ್ಡಾಯ ಮಾಡಿದ್ದು, ಪೋಲಿಸರು ದಂಡ ಹಾಕಿ ತಿಳಿಹೇಳಿದರೂ ಸಾರ್ವಜನಿಕರು ಇದರ ಬಗ್ಗೆ ಕಾಳಜಿವಹಿಸದೇ ಇರುವುದು ಸೂಕ್ತವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ

ಫ್ರೆಶ್ ನ್ಯೂಸ್

Latest Posts

Featured Videos