ಸಂವಿಧಾನ ವಿರೋಧಿಗಳ ವಿರುದ್ದ ಹೋರಾಟ

ಸಂವಿಧಾನ ವಿರೋಧಿಗಳ ವಿರುದ್ದ ಹೋರಾಟ

ಬೆಂಗಳೂರು, ಡಿ. 19: ಪೌರತ್ವ ತಿದ್ದುಪಡೆ ಕಾಯ್ದೆ ವಿರುದ್ದ ಪ್ರತಿಭಟನೆ ಹತ್ತಿಕ್ಕುವ ಕ್ರಮ, ರಾಜ್ಯದಾದ್ಯಂತ ೧೪೪ ನೀಷೇದಾಜ್ಞೆ ಹೇರಿರುವುದು ಕೂಡಾ ಸಂವಿಧಾನ ವಿರೋಧಿಯಾಗಿದ್ದು ಜನರ ದ್ವನಿಯನ್ನು ಅಡಗಿಸಲು ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುವ ರಾಜ್ಯ ಪೊಲೀಸ್ ಅಧಿಕಾರಿಗಳ ಪ್ರಯತ್ನ ಸಫಲವಾಗದು ಎಂದು ಸೋಶಿಯಲ್ ಡೆಮಾಕ್ರಿಟಿಕ್ ಪಾರ್ಟಿ ಆಫ್ ಇಂಡಿಯಾ ವಿರೋಧಿಸಿದೆ.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ  ಇಲಿಯಾಸ್  ಮಹಮ್ಮದ್ ತುಂಬೆ ಮಾತನಾಡಿ, ಅವರು ಧರ್ಮ-ಜಾತಿ ಆದಾರದಲ್ಲಿ ಒಡೆದು ಆಳುವ ನೀತಿಯನ್ನು ತಮ್ಮದಾಗಿಸಿಕೊಂಡು ಆಡಳಿತರೂಢ ಬಿಜೆಪಿ ಸರ್ಕಾರ ತಮ್ಮ ದಯನೀಯ ಕಾರ್ಯಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಅತ್ಯಾಚಾರಗಳನ್ನು ಜನರ ಮನಸ್ಸಿನಿಂದ ಬೇರೆಡೆಗೆ ಸೆಳೆಯುವ ಹುನ್ನಾರವನ್ನು ಮಾಡಲು ಹೊರಟಿರುವುದು ಖಂಡನೀಯವಾಗಿದ್ದು, ದೇಶದ ಹಿತಾಸಕ್ತಿಗೆ ಕೊಳ್ಳಿ ಇಟು ಪೌರತ್ವ ಕಾಯ್ದೆಯನ್ನು ಜಾರಿ ತರುತ್ತಿರುವುದು ದೇಶಕ್ಕೆ ಮಾರಕವಾಗಿದೆ ಎಂದರು.

ಸಂವಿಧಾನ ವಿರೋಧಿ, ಜನ ವಿರೋಧಿ, ಹಾಗೂ ಜಾತ್ಯಾತೀತ ವಿರೋಧಿ ಧೋರಣೆ-ಕ್ರಮಗಳನ್ನು ಕೈಗೊಳ್ಳುವ ಬಿಜೆಪಿ ಸರಕಾರ ಜನರ ದ್ವನಿಯನ್ನು ಮತ್ತು ಹಕ್ಕನ್ನು ಹತ್ತಿಕ್ಕುವ ಪೊಲೀಸ್ ಅಧಿಕಾರಿಗಳ ವಿರುದ್ದ ಎಸ್‌ಡಿಪಿಐ ತನ್ನ ಹೋರಾಟವನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos