ಎಚ್ಚರ, ತಮಿಳುನಾಡಿಗೆ ‘ಫ್ಯಾನಿ’ ಚಂಡಮಾರುತ ಅಪ್ಪಳಿಸಲಿದೆ!

ಎಚ್ಚರ, ತಮಿಳುನಾಡಿಗೆ ‘ಫ್ಯಾನಿ’ ಚಂಡಮಾರುತ ಅಪ್ಪಳಿಸಲಿದೆ!

ತಮಿಳುನಾಡು, ಏ. 25, ನ್ಯೂಸ್ ಎಕ್ಸ್ ಪ್ರೆಸ್:   ಮುಂದಿನ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿದುಬಂದಿದೆ. ಸುಮಾರು 50 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿಗೆ ‘ಫ್ಯಾನಿ’ ಚಂಡಮಾರುತ ಅಪ್ಪಳಿಸಲಿದ್ದು, ದಕ್ಷಿಣ ಭಾರತದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಸೋಮವಾರದಿಂದ ಬುಧವಾರದವರೆಗೆ ಸಾಮಾನ್ಯವಾಗಿದ್ದ ಸಮುದ್ರದ ಅಲೆಗಳು ಬುಧವಾರದ ಬಳಿಕ ಏಕಾಏಕಿ ಬದಲಾವಣೆ ಕಂಡಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಚಂಡಮಾರುತದ ಪರಿಣಾಮ ಗೋಚರಿಸಲಿದೆ. ಬರುವ ಭಾನುವಾರ ತಮಿಳುನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಇವೆಲ್ಲಾ ಭಾಗಗಳಲ್ಲೂ ಮಳೆಯಾಗಲಿದೆ. ಏಪ್ರಿಲ್ ಬಳಿಕ ಚಂಡಮಾರುತದ ಕಾಲ ಆರಂಭವಾಗುತ್ತದೆ. ಇದು ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳುತ್ತದೆ. ಅತಿ ಹೆಚ್ಚು ಉಷ್ಣಾಂಶದಿಂದಾಗಿ ಗಾಳಿಯಲ್ಲಿ ಏರು ಪೇರು ಉಂಟಾಗಿ ಅದು ಚಂಡಮಾರುತಕ್ಕೆ ಕಾರಣವಾಗುತ್ತದೆ. ಮೂರು, ನಾಲ್ಕಕ್ಕಿಂತ ಹೆಚ್ಚು ಚಂಡಮಾರುತಗಳು ಬಂಗಾಳಕೊಲ್ಲಿಯಿಂದ ಆರಂಭಗೊಳ್ಳುತ್ತವೆ. ಒಟ್ಟಿನಲ್ಲಿ ಮುಂದಿನ ವಾರಪೂರ್ತಿ ದೇಶಾದ್ಯಂತ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ. ಮೊಜಾಂಬಿಕ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿ ಪಡೆದ ‘ಇದಾಯಿ’ ಚಂಡಮಾರುತ ಚಂಡಮಾರುತ ಬಂಗಾಳಕೊಲ್ಲಿಯ ಪೂರ್ವ ಭಾಗದಿಂದ ದಕ್ಷಿಣ ಭಾರತ ಪ್ರವೇಶಿಸಲಿದೆ. ಆದರೆ ಇದು ದೃಢ ಪಟ್ಟಿಲ್ಲ, ತಜ್ಞರು ಈ ಕುರಿತು ಅಧ್ಯಯನ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos