ಇಂದು GT vs PBKS ಮುಖಾಮುಖಿ

ಇಂದು GT vs PBKS ಮುಖಾಮುಖಿ

ಬೆಂಗಳೂರು: ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಆತಿಥೇಯ ಗುಜರಾತ್ ಟೈಟನ್ಸ್ ತಂಡವು ಮತ್ತೊಂದು ಪಂದ್ಯವನ್ನು ಆಡುತ್ತಿರುವುದರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಕೊನೆಯ ಸೀಟಿನವರೆಗೂ ತುಂಬಿರುತ್ತದೆ. ಎರಡೂ ತಂಡಗಳು ಕೆಲವು ಸ್ಫೋಟಕ ಬ್ಯಾಟರ್‌ಗಳನ್ನು ಹೊಂದಿರುವುದರಿಂದ ಕ್ರೀಡಾಂಗಣದಲ್ಲಿ ಹೆಚ್ಚಿನ ಸಿಕ್ಸರ್, ಬೌಂಡರಿಗಳನ್ನು ನಿರೀಕ್ಷಿಸಬಹುದು.

ಪಂಜಾಬ್ ಕಿಂಗ್ಸ್ ತಂಡವು ಅತ್ಯುತ್ತಮ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ತಮ್ಮ ದಿನದಂದು ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ. ಆದರೂ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಎರಡು ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಯುವ ನಾಯಕ ಶುಭ್ಮನ್ ಗಿಲ್ ಮತ್ತು ಅನುಭವಿ ಬ್ಯಾಟರ್ ಶಿಖರ್ ಧವನ್ ನಡುವಿನ ಯುದ್ಧವಾಗಿದ್ದು, ಅಂತಿಮವಾಗಿ ಯಾರು ವಿಜಯ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಆದರೂ, ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಮೆಚ್ಚಿನ ತಂಡವಾಗಿ ಕಾಣುತ್ತಿದ್ದರೂ, ಪಂದ್ಯದ ವೇಳೆ ಎದುರಾಳಿ ತಂಡವನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಪಂದ್ಯವು ಪಂಜಾಬ್‌ನ ಬ್ಯಾಟಿಂಗ್‌ ಮತ್ತು ಗುಜರಾತ್‌ನ ಬೌಲಿಂಗ್ ನಡುವಿನ ಹೋರಾಟವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos