ವ್ಯಾಪಕ ಮಳೆ: ಜಲಾವೃತ್ತಗೊಂಡ ಜಮೀನುಗಳು

ವ್ಯಾಪಕ ಮಳೆ: ಜಲಾವೃತ್ತಗೊಂಡ ಜಮೀನುಗಳು

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಸತತ ಮಳೆ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶ ಮನೆಗಳು ಮತ್ತು ರೈತರ ಜಮೀನುಗಳು ಜಲಾವೃತ್ತಗೊಂಡಿದ್ದು ಜನಜೀವನ ಅಸ್ತ್ಯಸ್ತವಾಗಿದೆ.
ಜಿಲ್ಲೆಯ ಶಹಾಪೂರ ಮತ್ತು ಸುರಪುರ ತಾಲೂಕಿನಲ್ಲಿ ದಾಖಲೆ ಮಳೆ ಬಿದ್ದ ಕಾರಣ ನಗರದ ಅನೇಕ ತಗ್ಗು ಪ್ರದೇಶಗಳು ಮತ್ತು ಮುಖ್ಯ ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡು ಜನರ ಸಂಚಾರಕ್ಕೆ ತೊಂದರೆಯಾಗಿದೆ.
ಜಿಲ್ಲೆಯ ಬಹುತೇಕ ಎಲ್ಲಾ ಜಲಾಶಯಗಳು ಮತ್ತು ಕೆರೆ ಕೊತ್ತಲಗಳು ಭರ್ತಿಯಾಗಿದ್ದು ಹೊಲಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಡು ಮಾಡಿದೆ.
ಶಹಾಪೂರ ತಾಲೂಕಿನ ಕೊಳ್ಳುರು ಮತ್ತು ಬೀರನೂರು ಗ್ರಾಮಗಳು ಸೇರಿದಂತೆ ಅನೇಕ ಗ್ರಾಮಗಳ ಹೊಗದ್ದೆಗಳು ಜಲಾವೃತ್ತಗೊಂಡು ಹತ್ತಿ, ಮೆಣಸಿಕಾಯಿ ಮತ್ತು ಇತರ ಬೆಲೆಗಳು ನಷ್ಠವಾಗಿದ್ದು ರೈತರು ತೀವ್ರ ಸಣಕಷ್ಟ ಎದರಿಸುವಂತಾಗಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ ಸೆ.೩೦ರವರೆಗೆ ಜಿಲ್ಲೆಯಲ್ಲಿ ಮಳೆ ಬೀಳಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಕೃಷ್ಟಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಈಗ ಬೀಳುವ ಮಳೆಯಿಂದ ಯಾವುದೇ ಬೆಳೆ ರೈತರ ಕೈಗೆ ಸಿಗದಂತಾಗುತ್ತದೆ.
ಈಗಾಗಲೇ ಹತ್ತಿ ಮತ್ತು ತೊಗರಿ ಬೆಳೆಗಳು ಹೂ ಮತ್ತು ಕಾಯಿ ಬಿಡುವ ಹಂತದಲ್ಲಿವೆ. ಆದರೆ ಸತತ ಮಳೆಯಿಂದ ಅನೇಕ ರೋಗಗಳು ಹರಡುತ್ತಿದ್ದು, ಬೆಳೆಯ ಕುಂಠಿತಕ್ಕೆ ಕಾರಣವಾಗಲಿದೆ ಎಂಬ ಆತಂಕ ರೈತರದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos