ವಿದ್ಯಾರ್ಥಿಗಳ ಜಗಳ ಚಾಕು ಇರಿತದೊಂದಿಗೆ ಅಂತ್ಯ!

ವಿದ್ಯಾರ್ಥಿಗಳ ಜಗಳ ಚಾಕು ಇರಿತದೊಂದಿಗೆ ಅಂತ್ಯ!

ಚಿಕ್ಕೋಡಿ, ಜ. 14: ಹುಕ್ಕೇರಿ ಪಟ್ಟಣದ ಶಾಲೆಯೊಂದರಲ್ಲಿ ಬೆಂಚಿಗಾಗಿ 9 ನೇ ವರ್ಗದ ಬಾಲಕನಿಗೆ ಸಹಪಾಠಿ ಚಾಕು ಇರಿದಿರುವ ಘಟನೆ ನಡೆದಿದೆ.

ಹುಕ್ಕೇರಿ ಪಟ್ಟಣದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬೆಂಚ್ಗಾಗಿ ಕಿತ್ತಾಡಿಕೊಂಡಿದ್ದಾರೆ. ಬಳಿಕ ಸಹಪಾಠಿಯೊಬ್ಬ ಬಾಲಕನಿಗೆ ಚಾಕು ಇರಿದಿದ್ದಾನೆ. ಪರಿಣಾಮ ಬಾಲಕನ ಕೈ, ಬೆನ್ನು, ಹೊಟ್ಟೆ ಭಾಗದಲ್ಲಿ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.

9 ನೇ ವರ್ಗದ ಬಾಲಕರಿಂದ ಚಾಕುವಿನಿಂದ ಹೊಡೆದಾಟ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ಆಂತಕಕ್ಕೊಳಗಾಗಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಬಾಲಕನಿಗೆ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos