ಪದವಿಪೂರ್ವ ಕಾಲೇಜಿನಿಂದ ಚುನಾವಣಾ ಜಾಥಾ

ಪದವಿಪೂರ್ವ ಕಾಲೇಜಿನಿಂದ ಚುನಾವಣಾ ಜಾಥಾ

ಸೂಲಿಬೆಲೆ, ಸೆ. 16: ಸಂವಿಧಾನಬದ್ದವಾಗಿ ಬಂದಿರುವ ಮತದಾನದ ಹಕ್ಕನ್ನು ಎಲ್ಲರೂ ಕಡ್ಡಾಯವಾಗಿ ಚಲಾವಣೆ ಮಾಡುವ ತಮ್ಮ ಹಕ್ಕು ಕರ್ತವ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸೂಲಿಬೆಲೆ ಪೋಲಿಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಬಿ.ಎಂ.ಗೋವಿಂದ್ ಹೇಳಿದರು.

ಸೂಲಿಬೆಲೆ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮತದಾರರ ಸಾಕ್ಷರತಾ ಸಂಘವನ್ನು ಕಾಲೇಜಿನಲ್ಲಿ ರಚನೆ ಮಾಡಲಾಗಿದ್ದು, ಈ ಮುಖಾಂತರವಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವ ಜೊತೆಯಲ್ಲಿ ತಾವುಗಳು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಕರಾಗಿ ಕೈಜೋಡಿಸಬೇಕಿದೆ ಎಂದರು.

ಉಪನ್ಯಾಸಕ ರೇವಣ್ಣ ಸಿದ್ದಪ್ಪ ಮಾತನಾಡಿ ಪ್ರತಿಯೊಬ್ಬನಿಗೂ ಮತದಾನ ಹಕ್ಕು ನೀಡುವ ಮೂಲಕ ಅರ್ಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಹಾಗೂ ಉತ್ತಮವಾದ ಸರ್ಕಾರ ರಚನೆ ಮಾಡಿ ಅಭಿವೃದ್ದಿ ಮಾಡಿಸಿಕೊಳ್ಳುವ ಹಕ್ಕು ನೀಡಿದೆ ಜೊತೆಯಲ್ಲಿ ಮತದಾನ ಹಕ್ಕು ಮತ್ತು ಕರ್ತವ್ಯವಾಗಿ ಭಾವಿಸಿ ಹಕ್ಕು ಚಲಾವಣೆ ಮಾಡಬೇಕಿದೆ ಎಂದರು.

ದೇಶದಲ್ಲಿ ಸುಮಾರು 130 ಕೋಟಿ ಜನಸಂಖ್ಯೆ ಇದ್ದು, 2018ರ ಚುನಾವಣೆ ಪ್ರಕಾರವಾಗಿ ಸುಮಾರು 100 ಕೋಟಿ ಮತದಾರರಿದ್ದು, ಇದರಲ್ಲಿ ಕೇವಲ 60 ರಷ್ಟು ಮಾತ್ರ ಮತದಾನ ಮಾಡುತ್ತಿದ್ದಾರೆ ಉಳಿದ ಶೇ 40 ರಷ್ಟು ಚುನಾವಣೆ ಪ್ರಕ್ರಿಯೆಗಳಿಂದ ದೂರ ಉಳಿದಿದ್ದು, ಇವರಿಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಮೂಲಕ ಮತದಾನ ಹಕ್ಕು ಚಲಾಯಿಸಲು ಪ್ರೇರೆಪಿಸಬೇಕು ಎಂದರು.

ಪ್ರಾಚಾರ್ಯ ವೇಣುಗೋಪಾಲ್ ಮಾತನಾಡಿ ಮತದಾರರಿಗೆ ಸಾಕ್ಷರತೆ ಸಾರುವ ಮೂಲಕ ಮತದಾನವನ್ನು ಮಾಡುವುದರಿಂದ ಉಂಟಾಗುವ ಅನುಕೂಲಗಳು ಹಾಗೂ ಮಾಡದಿದ್ದರೆ ಉಂಟಾಗುವ ಆನಾನುಕೂಲಗಳ ಮಾಹಿತಿನೀಡಿದರು.

ಮಕ್ಕಳಿಂದ ಮುಖ್ಯರಸ್ತೆಯಲ್ಲಿ ಜಾಗೃತಿ ಜಾಥಾ ನೆಡೆಯಿತು, ಘೋಷಣೆ ಮೂಲಕ ಕಾಲೇಜ್ ನಿಂದ ಗ್ರಾಮಪಂಚಾಯತಿ, ಪೋಲಿಸ್ ಠಾಣೆಗಳಲ್ಲಿ, ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಈ ಸಂರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಪೋಲಿಸ್ ಸಿಬ್ಬಂದಿ ವರ್ಗ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos