ಚೀಟಿ ಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಚೀಟಿ ಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಹಟ್ಟಿಚಿನ್ನದಗಣಿ : ರೋಡಲ ಬಂಡಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನೆಡೆಯಿತು. 19 ಸದಸ್ಯರಲ್ಲಿ ಓರ್ವ ಸದಸ್ಯ ಮೃತನಾಗಿದ್ದರಿಂದ 18 ಜನರ ಸದಸ್ಯರು ಹಾಜರಿದ್ದರು, ಎಸ್,ಟಿ ಮಹಿಳೆ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾದ ಯಂಕಮ್ಮ ವಂದ್ಲೆಪ್ಪ ಮತ್ತು ಮಂಜುಳಾ ವೀರನಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಿದ್ದಣ ಬಸಣ್ಣ, ಬಿಜೆಪಿ ಅಭ್ಯರ್ಥಿ ಪವಿತ್ರಾ ಬಸವರಾಜ್ ನಾಮಪತ್ರ ಸಲ್ಲಿಸಿದರು.
ಮತದಾನ ಮಾಡಿದ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 9 ಮತಗಳಿಂದ ಸಮಬಲ ಹೊಂದಿದ್ದ ಕಾರಣ, ಚೀಟಿ ಎತ್ತುವ ಮೂಲಕ, ಅಧ್ಯಕ್ಷರಾಗಿ ಯಂಕಮ್ಮ ವಂದ್ಲೆಪ್ಪ, ಉಪಾಧ್ಯಕ್ಷರಾಗಿ ಸಿದ್ದಣ ಬಸಣ್ಣ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾದ ತಹಸೀಲ್ದಾರ್ ಚಾಮರಾಜ್ ಪಾಟೀಲ್ ಘೋಷಿಸಿದರು. ಸಿಪಿಐ ಮಹಾತೇಶ ವಿ ಸಜ್ಜನ್, ಪಿಎಸೈ ಪ್ರಕಾಶರೆಡ್ಡಿ ಡಂಬಳ, ಹಟ್ಟಿ ಠಾಣೆಯ ಎಎಸ್‍ಐ ಹನುಮಂತರಾಯ, ಲಿಂಗನಗೌಡ, ಹುಚ್ಚರೆಡ್ಡಿ, ಪೆÇಲೀಸ್ ಇಲಾಖೆ ಬಿಗಿ ಭದ್ರತೆಯಲ್ಲಿ ಚುನಾವಣೆ ಆಯ್ಕೆ ನಡೆಯಿತು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರಾಘವೇಂದ್ರ, ಪಿಡಿಓ ತೇಜಸ್, ಗ್ರಾ.ಪಂ.ಸಿಬ್ಬಂದಿಗಳಾದ ಭೀಮರಾಯ ಮುಷ್ಠುರು, ಕಾಂಗ್ರೇಸ್ ಯುವಮುಂಖಡ ಗುಂಡಪ್ಪ ಚಲುವಾದಿ, ಸೋಮಶೇಖರ ದೇಸಾಯಿ, ಈರಪ್ಪ, ಬಸನಗೌಡ, ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos